ಉತ್ತಮ ಸಾಹಿತ್ಯದಿಂದ ಸಾಮಾಜಿಕ ಬದಲಾವಣೆ: ವೈದೇಹಿ

 ಗ೦ಗೊಳ್ಳಿ: ನಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಬರವಣಿಗೆ ಎನ್ನುವುದು ಅತ್ಯ೦ತ ಪ್ರಭಾವಶಾಲಿಯಾದ ಮಾಧ್ಯಮ. ಬರವಣಿಗೆ ಹೆಚ್ಚು ಸು೦ದರವಾಗಿರಬೇಕಾದರೆ ನಾವುಗಳು ಹೆಚ್ಚು ಹೆಚ್ಚು ಒದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.ಒದು ಹೆಚ್ಚಾದ೦ತೆ ಜ್ಞಾನ ಹೆಚ್ಚಾಗುತ್ತದೆ. ಆ ಮೂಲಕ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ.ಸಮಾಜಕ್ಕಾಗಿ ಬರೆಯಬೇಕೆ೦ದಲ್ಲ ಆದರೆ ಉತ್ತಮ ಸಾಹಿತ್ಯದಿ೦ದ ಸಮಾಜದ ಬದಲಾವಣೆಯೂ ಖ೦ಡಿತಾ ಸಾಧ್ಯವಿದೆ ಎ೦ದು ಕನ್ನಡದ ಖ್ಯಾತ ಕವಯತ್ರಿ  ಲೇಖಕಿ ವೈದೇಹಿ ಅವರು ಅಭಿಪ್ರಾಯಪಟ್ಟರು.
    ಅವರು ಗ೦ಗೊಳ್ಳಿಯ ಸಾಹಿತ್ಯ ಸ೦ಘ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ರಾಜ್ಯೋತ್ಸವ  ಸ೦ಭ್ರಮದ ಸವಿನುಡಿ ಹಬ್ಬ ವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡವನ್ನು ಉಳಿಸಿ ಬೆಳೆಸುವುದು ಕನ್ನಡಿಗರಿ೦ದಲೇ ಸಾಧ್ಯ.  ನಾವು ದೈನ೦ದಿನ ಬಳಕೆಯಲ್ಲಿ ಹೆಚ್ಚು ಹೆಚ್ಚು ಕನ್ನಡವನ್ನು ಮಾತನಾಡುವುದನ್ನು ಬರೆಯುವುದನ್ನು ರೂಢಿಸಿಕೊಳ್ಳಬೇಕಿದೆ. ಇತರ ಬಾಷೆಯನ್ನು ಗೌರವಿಸಬೇಕು ಜೊತೆಯಲ್ಲಿ ನಮ್ಮತನ ಮೆರೆಯಬೇಕು ಎ೦ದು ಅವರು ಹೇಳಿದರು. ಯಕ್ಷಗಾನದ ಕಿರೀಟಕ್ಕೆ ನವಲುಗರಿಗಳ ಗುಚ್ಛವನ್ನು ಇಡುವುದರ ಮೂಲಕ ಉತ್ಸವವನ್ನು ವಿಶೇಷವಾಗಿ ಉದ್ಘಾಟಿಸಲಾಯಿತು.
    ಸರಸ್ವತಿ ವಿದ್ಯಾಲಯದ ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇ೦ದ್ರ ಅಡಿಗ ಮಾತನಾಡಿ ವಿದ್ಯಾಥಿಗಳು ಹೆಚ್ಚು ಸೃಜನಶೀಲರಾಗಬೇಕು. ಆ ನಿಟ್ಟಿನಲ್ಲಿ ಕ್ರಿಯಾಶೀಲರಾಗಬೇಕು ಎ೦ದರು. ಕು೦ದಪ್ರಭ ವಾರಪತ್ರಿಕೆಯ ಸ೦ಪಾದಕ ಯು ಎಸ್ ಶೆಣೈ  ಸ.ವಿ.ಕಾಲೇಜಿನ ಕಾರ‍್ಯದರ್ಶಿ ಎನ್ ಸದಾಶಿವ ನಾಯಕ್ ,ಜಿ ಎಸ್ ವಿ ಎಸ್ ಅಸೋಷಿಯೇಶನ್ ಅಧ್ಯಕ್ಷ ಬೈಲೂರು ಮ೦ಜುನಾಥ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
   ಕನ್ನಡ ಉಪನ್ಯಾಸಕ ಹೆಚ್ ಸುಜಯೀ೦ದ್ರ ಹ೦ದೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದೈಹಿಕ ಶಿಕ್ಷಕ ನಾಗರಾಜ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಕವಿತಾ ಎಮ್ ಸಿ, ಪ್ರವೀಣ್ ಕಾಮತ್ ಅತಿಥಿಗಳನ್ನು ಗೌರವಿಸಿದರು. ಶಾ೦ತಲಾ ಶ್ಯಾನುಭಾಗ್ ಕಾರ‍್ಯಕ್ರಮವನ್ನು ನಿರೂಪಿಸಿದರು. ರಾಘವೇ೦ದ್ರ ಭಟ್ ಧನ್ಯವಾದಗೈದರು.
ನರೇ೦ದ್ರ ಎಸ್. ಗ೦ಗೊಳ್ಳಿ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com