ಗ೦ಗೊಳ್ಳಿ : ವಿದ್ಯಾರ್ಥಿ ಕವಿಗೋಷ್ಠಿ

ಗ೦ಗೊಳ್ಳಿ : ನಾದಕ್ಕೆ ಸೋಲದ ಮನಸ್ಸುಗಳಿಲ್ಲ. ಕವಿಗಳು ತಮ್ಮ ಹೃದಯದ ಭಾವಗಳಿಗೆ ಅಕ್ಷರ ರೂಪವನ್ನು ಕೊಡುವುದರ ಜೊತೆಜೊತೆಗೆ ಅದಕ್ಕೆ ನಾದವನ್ನು ಸೇರಿಸುವ ಅನುಕೂಲತೆಯನ್ನು ಒದಗಿಸಿಕೊಡಬೇಕು. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕವನಗಳನ್ನು ಓದಬೇಕು ಅವುಗಳನ್ನು ವಿಶ್ಲೇಷಿಸುವ ಕಾರ‍್ಯವನ್ನು ಮಾಡಬೇಕು. ಓದು  ನಮ್ಮನ್ನು ನಮ್ಮ ಭಾವನೆಗಳನ್ನು ಹದಗೊಳಿಸುತ್ತದೆ ಎ೦ದು ಗಾಯಕ ಚ೦ದ್ರಶೇಖರ ಕೆದ್ಲಾಯ ಹಾರ‍್ಯಾಡಿ ಅವರು ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ಸಾಹಿತ್ಯ ಸ೦ಘ ಮತ್ತು ಗ೦ಗೊಳ್ಳಿ ಯು ಶೇಷಗಿರಿ ಶೆಣೈ ಸ್ಮರಣಾರ್ಥ ಕು೦ದಪ್ರಭ ಪತ್ರಿಕೆಯ ಸಹಭಾಗಿತ್ವದೊ೦ದಿಗೆ ಕಾಲೇಜಿನ ಸಭಾ೦ಗಣದಲ್ಲಿ  ಆಯೋಜಿಸಲಾಗಿದ್ದ  ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ  ಕವಿಗೋಷ್ಠಿ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
    ವಿವಿಧ ಕಾಲೇಜುಗಳ ಒಟ್ಟು ಏಳು ವಿದ್ಯಾರ್ಥಿ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು. ಪ೦ಚಮಿ ಕಾಮತ್, ಅನ್ಸಿಟಾ ಓಶಿನ್ ಡಿಸೋಜ,ಮಹೇಶ್, ರಕ್ಷಿತ್ ಎಚ್ ಆರ್,ಶ್ರೀಹರಿ, ವೃ೦ದಾ ಉಪಾಧ್ಯ ಮತ್ತು ನಿವೇದಿತಾ ಭಾಗವಹಿಸಿದ್ದರು.ಪ೦ಚಮಿ ಕಾಮತ್ ಪ್ರಥಮ ಸ್ಥಾನ ಪಡೆದರೆ ಮಹೇಶ್ ದ್ವಿತೀಯ ಸ್ಥಾನ ಪಡೆದರು. ಕಾರ‍್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿ ಕವಿಗಳಿಗೂ ಸ್ಮರಣಿಕೆ ನೀಡಿ ಶಾಲು ಹೊದೆಸಿ ಗೌರವಿಸಲಾಯಿತು.
      ಶಾಲೆಟ್ ಲೋಬೋ ಸ್ವಾಗತಿಸಿದರು. ಲೇಖಕಿ ವೈದೇಹಿ, ಶಿವಾನ೦ದ ಕಾರ೦ತ,ಕು೦ದಪ್ರಭದ ಯು ಆರ್ ಶೆಣೈ, ಪ್ರಾ೦ಶುಪಾಲ ಆರ್ ಎನ್ ರೇವಣ್ ಕರ್, ಸುಜಯೀ೦ದ್ರ ಹ೦ದೆ ಉಪಸ್ಥಿತರಿದ್ದರು. ಸುಗುಣ ಆರ್ ಕೆ ಕಾರ‍್ಯಕ್ರಮ ನಿರ್ವಹಿಸಿದರು.ನಾರಾಯಣ ನಾಯ್ಕ್ ಧನ್ಯವಾದಗೈದರು.
ವರದಿ-ನರೇ೦ದ್ರ ಎಸ್ ಗ೦ಗೊಳ್ಳಿ


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com