ಗ೦ಗೊಳ್ಳಿಯಲ್ಲಿ ನೆಹರೂ ದಿನಾಚರಣೆ

ಗ೦ಗೊಳ್ಳಿ: ಅಭಿವೃದ್ಧಿ ಕುರಿತ೦ತೆ ನೆಹರೂ ಅವರ ಕೆಲ ವಿಚಾರ ಧಾರೆಗಳು ಇ೦ದಿಗೂ ಪ್ರಸ್ತುತ.ಅದನ್ನು ಗ್ರಹಿಸುವ ಮನೋಭಾವನೆಯನ್ನು ನಾವು ಬೆಳೆಸಿಕೊಳ್ಳಬೇಕಿದೆ ಎ೦ದು ಗ೦ಗೊಳ್ಳಿ ಗ್ರಾಮ ಪ೦ಚಾಯತ್ ಸದಸ್ಯೆ ಜಿ.ಚ೦ದು ಅವರು ಹೇಳಿದರು. ಅವರು ಮೇಲ್ ಗ೦ಗೊಳ್ಳಿಯ ಸ.ಕಿ.ಪ್ರಾ. ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸಭೆಯಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷೆ ಮೂಕಾ೦ಬಿಕಾ. ಅ೦ಬೇಡ್ಕರ್ ಯುವಕ ಮ೦ಡಲದ ಉಪಾಧ್ಯಕ್ಷರಾದ  ನಾಗರಾಜ ,ಕಾರ‍್ಯದರ್ಶಿ ಶಶಿದೀಪ,ಬಬ್ಬುಸ್ವಾಮಿ ಸ್ವಯ೦ ಸೇವಾ ಸ೦ಘದ ಅಧ್ಯಕ್ಷ ಸ೦ದೇಶ್ , ಅಮೃತ ಜ್ಯೋತಿ ಸ್ತ್ರೀ ಶಕ್ತಿ ಸ೦ಘದ ಅಧ್ಯಕ್ಷೆ ಜ್ಯೋತಿ, ಅ೦ಗನವಾಡಿ ಕಾರ‍್ಯಕರ್ತೆ ನಾಗವೇಣಿ  ಮತ್ತು ದೀಕ್ಷಾ ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕ ರಮೇಶ ಮಹಾಲೆ  ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿಕ್ಷಕಿ ರತ್ನಮ್ಮ ಸ್ವಾಗತಿಸಿ ,ಹೇಮಾವತಿ ವ೦ದಿಸಿದರು.
 ನರೇ೦ದ್ರ ಎಸ್ ಗ೦ಗೊಳ್ಳಿ

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com