ಕಿಡ್ನಿ ವೈಪಲ್ಯ: ನೆರವಿಗಾಗಿ ಕೋರಿಕೆ

ಕುಂದಾಪುರ: ಎರಡು ಕಿಡ್ನಿ ವೈಪಲ್ಯದಿಂದ ನರಳುತ್ತಿರುವ ಯುವತಿಗೆ ಮಾನವೀಯ ನೆರವು ಬೇಕಾಗಿದೆ.
   ಉಡುಪಿ ತಾಲೂಕಿನ ಸಾಲಿಕೇರಿ ರಾಘವೇಂದ್ರ ಶೆಟ್ಟಿಗಾರ ಅವರ ಪತ್ನಿ ಪೂರ್ಣಿಮಾ (38) ಬೀಡಿ ಕಟ್ಟಿಕೊಂಡು ಸಂಸಾರ ನಿರ್ವಹಿಸುತ್ತಿರುವ ಈಕೆಗೆ ಕಳೆದ ಏಳು ವರ್ಷಗಳಿಂದ ತನ್ನ ಎರಡೂ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದಾರೆ. ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಈಗಾಗಲೇ ರೂ. 14 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿರುತ್ತಾರೆ. ಹೊಟೇಲ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಪತಿ, ವಯೋವೃದ್ಧ ತಂದೆ, ತಾಯಿ ಹಾಗೂ 9ನೇ ತರಗತಿ ಓದುತ್ತಿರುವ ಮಗಳು ಇದ್ದಾಳೆ. ವಾರಕ್ಕೆ ಎರಡು ಬಾರಿ ಡಯಾಲಿಸಿಸ್‌, ತಿಂಗಳಿಗೆ 30 ಸಾವಿರಕ್ಕೂ ಹೆಚ್ಚು ಖರ್ಚು ಬರುತ್ತದೆ. ಈಗಾಗಲೇ ಚಿಕಿತ್ಸೆಗಾಗಿ ತುಂಬಾ ಸಾಲಮಾಡಿಕೊಂಡಿದ್ದು, ಮುಂದಿನ ಚಿಕಿತ್ಸೆಯ ವೆಚ್ಚ ಭರಿಸಲು ಅಶಕ್ತರಾಗಿರುವುದರಿಂದ ಹಣಕಾಸಿನ ನೆರವಿಗಾಗಿ ಬಡಕುಟುಂಬ ನಿರೀಕ್ಷೆಯಲ್ಲಿದ್ದಾರೆ. ಧನ ಸಹಾಯ ನೀಡುವವರು ಕರ್ನಾಟಕ ಬ್ಯಾಂಕ್‌ ಉಪ್ಪಿನಕೋಟೆ -ಬ್ರಹ್ಮಾವರ ಉಳಿತಾಯ ಖಾತೆ ಸಂಖ್ಯೆ 7172500100281301 ಐಎಫ್‌ ಎಸ್‌ಸಿ ಕೋಡ್‌ ಕೆಎಆರ್‌ಬಿ 0000717 ಮೂಲಕ ಸಲ್ಲಿಸಬಹುದು. ದೂರವಾಣಿ ಸಂಖ್ಯೆ: 9900357245 ಕ್ಕೆ ಸಂಪರ್ಕಿಸಬಹುದು

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com