ಡಿ.13-14: ಜನನುಡಿ-2014, ಸಾಹಿತ್ಯ ಸಮಾವೇಶ

ಮಂಗಳೂರು: ಸಾಹಿತ್ಯ ನೊಂದವರ ಧ್ವನಿಯಾಗಲಿ, ಸಾಹಿತ್ಯ ನೋವಿನ ಪ್ರತಿಬಿಂಬವಾಗಲಿ, ಬಂಡಾಯದ ಬಾವುಟವಾಗಲಿ ಎಂಬ ಆಶಯದೊಂದಿಗೆ ಡಿಸೆಂಬರ್ 13 ಮತ್ತು 14ರಂದು ಮಂಗಳೂರಿನ ಶಾಂತಿ ಕಿರಣ ನಂತೂರಿನಲ್ಲಿ “ಜನನುಡಿ 2014” ಎರಡು ದಿನಗಳ ಸಾಹಿತ್ಯ ಸಮಾವೇಶಕ್ಕೆ ನಡೆಯಲಿದೆ.  
     ಸಮಾವೇಶವನ್ನು ಬೆಂಗಳೂರು ನಿಡುಮಾಮಿಡಿ ಮಹಾಸಂಸ್ಥಾನ ಮಠದ ಶ್ರೀ ವೀರಭದ್ರ ಚನ್ನಮಲ್ಲ ಮಹಾಸ್ವಾಮೀಜಿ ಉದ್ಘಾಟಿಸಲಿದ್ದು, ಉದ್ಘಾಟನಾ ಸಮಾರಂಭದ ಡಾ ಮಲ್ಲಿಕಾ ಘಂಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೆ. ನೀಲಾ ಆಶಯ ಭಾಷಣ ಮಾಡಲಿದ್ದು, ಸಾಹಿತಿ ಸಾರಾ ಅಬೂಬಕ್ಕರ್. ಮಾವಳ್ಳಿ ಶಂಕರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
   ಎರಡು ದಿನದ ಸಮಾವೇಶದಲ್ಲಿ ವಿವಿಧ ವಿಚಾರಗಳ ಕುರಿತಾಗಿ ವಿಚಾರ ಮಂಡನೆ, ಕವಿಗೋಷ್ಠಿ, ಚಳುವಳಿಯ ಹಾಡುಗಳ ಗಾಯನ ನಡೆಯಲಿದೆ.
       ಡಿ.14ರ ಸಂಜೆ 5:30 ಜರುಗಲಿರುವ ಸಮಾರೋಪ ಸಮಾರಂಭದ ಆಧ್ಯಕ್ಷತೆಯನ್ನು ಡಾ. ಜಿ. ರಾಮಕೃಷ್ಣ ವಹಿಸಲಿದ್ದು, ಆರ್. ಕೆ. ಹುಡುಗಿ, ಡಾ. ಮೀನಾಕ್ಷಿ ಬಾಳಿ ಉಪಸ್ಥಿತರಿರುವರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com