ನೂತನ ನಿಯಮಾವಳಿಗಳೊಂದಿಗೆ ಲೀಗ್ ಪ್ರಾಯೋಗಿಕ ಕಂಬಳ

ಅಜೆಕಾರು:  ಪ್ರಾಣಿ ಹಿಂಸೆ ಕುರಿತು ಸುಪ್ರೀಂ ಕೋರ್ಟಿನ ನಿರ್ದೇಶನಕ್ಕೆ ಪೂರಕವಾಗಿ ಕಂಬಳದ ಕೋಣಗಳ ಮೇಲಿನ ಹಿಂಸೆಗೆ ತಿಲಾಂಜಲಿ ಇಡಲು ಕಂಬಳ ಸಮಿತಿ ತನ್ನ ಮಹಾ ಸಭೆಯಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದು ಕೊಂಡಿದೆ.
ನೂತನ ನಿಯಮಮಾವಳಿಗಳೊಂದಿಗೆ  ಕಂಬಳ ಹೇಗೆ ನಡೆಯ ಬಹುದೆಂಬ ಕಂಬಳಾಭಿಮಾಣಿಗಳ ಕುತೂಹಲಕ್ಕೆ ತೆರೆ ಹಾಕಲು ಸಮಿತಿಯು ಪ್ರಾಯೋಜಿಕ ಕಂಬಳವನ್ನು ಆಯೋಜಿಸಿದೆ.
     ಲೀಗ್ ಮಾದರಿಯ ಕಂಬಳ ನೂತನ ನಿಯಮಾವಳಿಗಳ ಅನುಸಾರ ನವೆಂಬರ್ ೨ ರಂದು ನಡೆಯಲಿದ್ದು ಕಂಬಳದ ಕೋಣಗಳಿಗೆ ಹಿಂಸೆಯನ್ನು ತಡೆಯಲು ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ ಹೇಳಿದರು.
       ಅವರು ಕಾರ್ಕಳದ ಪ್ರಕಾಶ ಹೊಟೇಲಿನಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು.
ಮಹಾ ಸಭೆಯಲ್ಲಿ ಕಂಬಳದ ಉಳಿವಿಗಾಗಿ ಸೂತ್ರಗಳನ್ನು ರೂಪಿಸಲಾಗಿದ್ದು  ಅವುಗಳ ಅನುಷ್ಠಾನ ಹೇಗಾಗುತ್ತದೆ ಎಂಬುದಕ್ಕೆ ಪೂರಕವಾಗಿ ಪ್ರಾಯೋಗಿಕ ಕಂಬಳವನ್ನು ಆಯೋಜಿಸಲಾಗಿದದ್ದು ಮೊದಲ ಬಾರಿಗೆ ಸಮಿತಿಯು ಕ್ರೀಡೆಗಳಲ್ಲಿ ಇರುವಂತೆ ಲೀಗ್ ಮಾದರಿಯನ್ನು ಅಳವಡಿಸಲಾಗಿದೆ. ಹಾಗಾಗಿ ಅಂತಿಮ ಹಂತಕ್ಕೆ ಬರುವ ಕೋಣಗಳಿಗೆ ಕನಿಷ್ಠ ಏಳುಭಾರಿ  ಸ್ಪರ್ಧಾತ್ಮಕ ಓಟದಲ್ಲಿ ಭಾಗವಹಿಸುವ ಅವಕಾಶ ಆಗುತ್ತದೆ ಎಂದು ಅವರು ಹೇಳಿದರು.
    ಪೂರ್ಣ ಪ್ರಮಾಣದ ಕಂಬಳವೇ ಇಲ್ಲಿ ನಡೆಯಲಿದ್ದು ಹೊನಲು ಬೆಳಕಿನ ವ್ಯವಸ್ಥೆ ಮತ್ತು ಚಿನ್ನದ ಪವನುಗಳ ಬಹುಮಾನಗಳು ಕೂಡಾ ಇವೆ. ಅಂತಿಮ ಹಮತಗಳಲ್ಲಿ ಲೀಗ್ ಮಾದರಿಯಲ್ಲಿ ಕೋಣಗಳು ಕರೆಯಲ್ಲಿ ಕಾಣ ಸಿಗುವುದರಿಂದ ಕಂಬಳಾಭಿಮಾನಿಗಳಿಗೆ ಉತ್ಸಾಹ ಹೆಚ್ಚಲಿದೆ ಎಂದು ಪ್ರಧಾನ ಕಾರ್ಯದರ್ಶಿ ಸುರೇಶ ಪೂಜಾರಿ  ತಿಳಿಸಿದರು.
ಕಂಬಳದ ಕೋಣಗಳಿಗೆ ಹೊಡೆದ ಪ್ರಕರಣಗಳು ನಡೆಯಲಾರವು, ಅಂತಹ ಪ್ರಕರಣಗಳು ಸಂಭವಿಸಿದರೆ ಅದಕ್ಕೆ ನೇರವಾಘಿ ಕೋಣಗಳ ಯಜಮಾನರುಗಳೇ ಹೊಣೆ- ಸಮಿತಿಯಲ್ಲ ಎಂದು ತೀರ್ಪುಗಾರರ ಸಮಿತಿಯ ಸಂಚಾಲಕ ರಾಜೀವ ಎಂ. ಶೆಟ್ಟಿ ಎಡ್ತೂರು ಹೇಳಿದರು. ಜಿಲ್ಲಾ ಕಂಬಳ ಸಮಿತಿಯ ಸಂಚಾಲಕ ಸೀತಾರಾಮ ಶೆಟ್ಟಿ, ಪ್ರಸಾದ್. ಈದು ಅಶೋಕ್ ಕುಮಾರ್, ಸುರೇಶ್ ಪ್ರಭು ರವೀಂದ್ರ ಕುಮಾರ್ ಕುಕ್ಕುಂದೂರು, ಜಾನ್ ಸಿರಿಲ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.

ಕಂಬಳ ಯಜಮಾನರಿಗೆ ಸಂಬಂಧಿಸಿದ ನಿರ್ಣಯಗಳು:
ಓಡಿಸುವವನಿಗೆ ಮತ್ತು ಯಜಮಾನರಿಗೆ ಮಾತ್ರ ಗೌರವದ ಬೆತ್ತ
ಕಂಬಳದಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾ ಕೋಣಗಳಿಗೆ ಕರೆಯಲ್ಲಿ ಓಡಿಸುವಾಗ ಹೊರತು ಪಡಿಸಿ ಕಂಬಳದ ಗಂತಿನಲ್ಲಿ, ಮಂಜೊಟ್ಟಿಯಲ್ಲಿ ಕೋಣಗಳಿಗೆ ಹೊಡೆಯುವುದನ್ನು ಸಮಿತಿ ನಿಷೇಧಿಸಿದೆ.
ಕೋಣಗಳನ್ನು ಓಡಿಸುವವನಿಗೆ ಓಡಿಸುವಾಗ ಮಾತ್ರ ಬೆತ್ತ ಮತ್ತು ಯಜಮಾನರ ಕೈಯಲ್ಲಿ ಗೌರವದ ಸಂಕೇತವಾಗಿ ಒಂದು ಬೆತ್ತ ಹಿಡಿಯಲು ಮಾತ್ರ ಅವಕಾಶ
೨. ಕೋಣ ಓಡಿಸುವವ ಮತ್ತು ಗಂತಿನಲ್ಲಿ ಕೋಣ ಬಿಡುವವರು ಹಗ್ಗ ಹಿರಿಯ- ಕಿರಿಯ, ನೇಗಿಲು ಹಿರಿಯ- ಕಿರಿಯ ಹೀಗೆ ನಾಲ್ಕು ವಿಭಾಗಗಳ ಎರಡು ಯಜಮಾನರ ಜೊತೆ ಮಾತ್ರ ಕಾರ್ಯ ನಿರ್ವಹಿಸಲು ಅವಕಾಶ. ಕಂಬಳ ಕೋಣಗಳನ್ನು ಕರೆಗೆ ಇಳಿಸುವಾಗ ತಮ್ಮ ಹೆಸರು , ಕೋಣಗಳನ್ನು ಓಡಿಸುವವರ ಮತ್ತು ಗಂತಿನಲ್ಲಿ ಕೋಣ ಬಿಡುವವರ ಹೆಸರನ್ನು ನೋಂದಾಯಿಸ ಬೇಕು.
೩.  ಎರಡು ವಿಭಾಗಗಳಲ್ಲಿ ಗಂತಿನಲ್ಲಿ ಕೋಣ ಬಿಡಲು ನಿಯೋಜಿತನಾದ ವ್ಯಕ್ತಿ ಮುಂದೆ ಬೇರೆ ೨ ವಿಭಾಗಗಳಲ್ಲಿ ಸಹಾಯಕನಾಗಿ ಮಾತ್ರ ಕಾರ್ಯ ನಿರ್ವಹಿಸ ಬಹುದು.
೪: ಗಂತಿನಲ್ಲಿ ಕೋಣ ತಿರುಗಿಸಿ ಬಿಡುವವರು ಮತ್ತು ಕೋಣ ಓಡಿಸುವವರು ಹೆಚ್ಚ್‌ಉವರಿಯಾಗಿ ೩ ನೇ ಯಜಮಾನರ ಬಳಿ ಕೋಣಗಳನ್ನು ಗಂತಿನಲ್ಲಿ ತಿರುಗಿಸಿ ಬಿಟ್ಟರೆ ಅಥವಾ ಓಡಿಸುವವ ಓಡಿದರೆ ಮೂರನೇ ಯಜಮಾನ ಸ್ಪರ್ಧಿಸುವ  ಹಕ್ಕನ್ನು ಕಳೆದು ಕೊಳ್ಳುತ್ತಾರೆ.
೫. ಕಂಬಳದ ಯಜಮಾನರು ಯಾವುದೇ ರೀತಿಯ ಸಮಸ್ಯೆಗೊಳಗಾದರೆ ಅದನ್ನು ಲಿಖಿತವಾಗಿ ಮುಖ್ಯ ತೀರ್ಫುಗಾರರ ಬಳಿ ದುರಾಗಿ ದಾಖಲಿಸುವುದು ಹೀಗೆ ಅನೇಕ
 ನಿರ್ಣಯಗಳನ್ನು ಸಭೆಯಲ್ಲಿ ತೆಗೆದುಕೊಂಡು ಅನುಷ್ಠಾನಗೊಳಿಸಲು ಕಂಬಳ ಸಮಿತಿ ಕಾಯಪ್ರವತ್ತವಾಗಿದೆ.
ಕಳೆದ ಬಾರಿ ೨೪ ಗಂಟೆಗಳೋಳಗೆ ಕಂಬಳ ಮುಗಿಸುವ ಮತ್ತು ಸಮಯಪಾಲನೆಯ ಕುರಿತ ಕಠಿಣ ನಿರ್ಧಾರಗಳನ್ನು ಪ್ರಕಟಿಸಿ ಯಶಸ್ವಿಯಾದ ಸ್ಫೂರ್ತಿಯಲ್ಲಿ ಸಮಿತಿ ಈ ಬಾರಿ ಹೊಸ ಶಯಗಳನ್ನು ಇರಿಸಿ ಕೊಂಡಿದೆ. ಸರ್ವರ ಸಹಕಾರದ ನಿರೀಕ್ಷೆಯಲ್ಲಿ ಸಮಿತಿ ಇದೆ,

ವರದಿ: ಶೇಖರ ಅಜೆಕಾರು


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com