ಕಂಬಳ ನಿಷೇಧ ವಿವಾದ: ಸರಕಾರ ಮಧ್ಯ ಪ್ರವೇಶಿಸಲಿ

ಕುಂದಾಪುರ:  ಜಿಲ್ಲಾಡಳಿತ ಕರಾವಳಿಯ ಜನಪದೀಯ ಕ್ರೀಡೆ ಕಂಬಳಕ್ಕೆ ನಿಷೇಧ ಹೇರಿರುವುದರಿಂದ ಜಿಲ್ಲೆಯಲ್ಲಿ ಸೂತಕದ ಛಾಯೆ ಮೂಡಿಸಿದೆ. ಸರಕಾರ ತತ್‌ಕ್ಷಣ ಮಧ್ಯ ಪ್ರವೇಶಿಸಿ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ರೈತರ ಕ್ರೀಡೆಗೆ ಮರುಜೀವ ನೀಡಬೇಕು ಎಂದು ಕರ್ನಾಟಕ ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ ಒತ್ತಾಯಿಸಿದ್ದಾರೆ. 

ಅವರು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ನ್ಯಾಯಾಲಯದ ಆದೇಶ, ತೀರ್ಪಿಗೆ ತಲೆ ಬಾಗುತ್ತೇವೆ. ಆದರೆ ಕಂಬಳ ನಿಷೇಧ ನ್ಯಾಯಸಮ್ಮತವಲ್ಲ ಎಂದು ಅವರು ಪ್ರತಿಪಾದಿಸಿದರು. 

ಕಾಸರಗೋಡಿನಿಂದ ಮೊದಲ್ಗೊಂಡು ಬೈಂದೂರಿನ ಶಿರೂರಿನವರೆಗೆ ಕಂಬಳ ಮಹೋತ್ಸವ ಅನುಚೂನವಾಗಿ ನಡೆದು ಕೊಂಡು ಬಂದಿದೆ. ಹಲವೆಡೆ ಇದೊಂದು ಧಾರ್ಮಿಕ ಸಂಪ್ರದಾಯವಾಗಿಯೂ ಈಗಲೂ ಚಾಲ್ತಿಯಲ್ಲಿದೆ. ಕಷಿ ಕಾಯಕ ಮುಗಿಸಿದ ರೈತ ಮನೋರಂಜನೆಗಾಗಿ ನಡೆಸಿಕೊಂಡು ಬಂದಿರುವ ಕಂಬಳ ಗ್ರಾಮೀಣ ಪ್ರದೇಶದ ಜಾತ್ರೆಯೂ ಹೌದು. ಕಂಬಳದಿಂದ ಯಾವ ಹಿಂಸೆಯೂ ನಡೆಯುತ್ತಿಲ್ಲ. ತಮಿಳುನಾಡಿನ ಜಲ್ಲಿಕಟ್ಟು ಪ್ರಕರಣ ಮುಂದಿಟ್ಟುಕೊಂಡು ಕಂಬಳ ನಿಷೇಧಿಸಿರುವುದು ಸರಿಯಲ್ಲ ಎಂದು ಅವರು ಹೇಳಿದರು. ತಾಲೂಕು ರೈತ ಸಂಘದ ಉಪಾಧ್ಯಕ್ಷ ವಸಂತ ಹೆಗ್ಡೆ ಉಪಸ್ಥಿತರಿದ್ದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com