ಮುವತ್ತುಮುಡಿ-ಕನ್ನಡ ಕುದ್ರು ಸಂಪರ್ಕ ಸೇತುವೆಗೆ ಶಿಲಾನ್ಯಾಸ


ಕುಂದಾಪುರ: ಕನ್ನಡಕುದ್ರು ನಿವಾಸಿಗಳ ಬಹುಕಾಲದ ಬೇಡಿಕೆಯಾದ ಹೆಮ್ಮಾಡಿ ಗ್ರಾ. ಪಂ. ವ್ಯಾಪ್ತಿಯ ಮುವತ್ತುಮುಡಿ ಕನ್ನಡಕುದ್ರು ಸೇತುವೆಯ ಶಿಲನ್ಯಾಸ ಕಾರ್ಯಕ್ರಮ ಮಂಗಳವಾರ ಜರುಗಿತು.

   ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್  7.57ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇತುವೆಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿ  ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಹಂತ ಹಂತವಾಗಿ ಅನುಷ್ಠಾನಗೊಳ್ಳುತ್ತಿವೆ.  ಸೇತುವೆ ನಿರ್ಮಾಣದ ಬಳಿಕ ಇಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುವ ವಿಶ್ವಾಸವಿದೆ. ಇಲ್ಲಿನಂತೆಯೇ ಬಡಾಕೆರೆಯ ಸೇತುವೆ ನಿರ್ಮಾಣಕ್ಕೂ ಶೀಘ್ರ ಶಿಲನ್ಯಾಸ ಮಾಡಲಾಗುವುದು ಎಂದರು.
    ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ ನವೆಂಬರ್ 3 ಕನ್ನಡಕುದ್ರುವಿನ  ಜನರಿಗೆ ಚಾರಿತ್ರಿಕ ದಿನವಾಗಿದೆ. ಇಲ್ಲಿ ಸೇತುವೆ ನಿರ್ಮಾಣದ ಬಳಿಕ ನಿಜವಾದ ಸ್ವಾತಂತ್ರ್ಯ ಈ ಭಾಗದ ಜನರಿಗೆ ಸಿಕ್ಕಿಂತಾಗುವುದು ಎಂದರು.
   ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ತಾನು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯನ್ನು ಈಡೇರಿಸುವ ಕಾಲ ಈಗ ಸನ್ನಿತವಾಗಿದೆ ಎಂದರು. ಕೆಲಸವನ್ನೇ ಮಾಡದೇ ಪ್ರಚಾರ ಗಿಟ್ಟಿಸುವ ಈ ಕಾಲದಲ್ಲಿ ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳನ್ನು ಮಾಡಿಯೂ ಪ್ರಚಾರ ಪಡೆಯುವಲ್ಲಿ ಹಿಂದುಳಿದಿದೆ. ಬೈಂದೂರಿನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳ ತ್ವರಿತಗತಿಯಲ್ಲಿ ನಡೆಯುತ್ತಿದ್ದು ಮುಂದಿನ ಬಜೆಟ್ ಮಂಡನೆಯ ವೇಳೆಗೆ ಬೈಂದೂರು ತಾಲೂಕು ಘೋಷಣೆ ಭರವಸೆ ನೀಡಿದರು.
     ಸಮಾರಂಭದಲ್ಲಿ  ಜಿಲ್ಲಾ ಪಂಚಾಯತ್ ಸದಸ್ಯ ಅನಂತ್ ಮೊವಾಡಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜು ಪೂಜಾರಿ, ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಕಾಂಗ್ರೆಸ್ ನ ಹಿರಿಯ ಮುಖಂಡ ಎಂ. ಎ. ಗಫೂರ್, ಗಂಗೊಳ್ಳಿ ಇಗರ್ಜಿ ಧರ್ಮಗುರು ಫಾದರ್ ಎ. ಡಿ. ಲೀಮಾ, ಕುಂದಾಪುರ ಧರ್ಮಗುರು ಫಾದರ್ ಅನಿಲ್ ಡಿಸೋಜಾ, ಬ್ಲಾಸಮ್  ಆಸ್ಕರ್ ಫೆರ್ನಾಂಡಿಸ್, ಸ್ಥಳೀಯ ಮುಖಂಡ ಎಡ್ರಿಕ್ ಕ್ರಾಸ್ತ, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಹಿರಿಯ ಅಧೀಕ್ಷಕ ರಾಜಶೇಖರಪ್ಪ, ಗ್ರಾಮ ಪಂಚಾಯತ್ ಸದಸ್ಯ ಜೆರಾಲ್ಡ್ ಕ್ರಾಸ್ತ ಮೊದಲಾದವರು ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com