ಕರ್ಣಾಟಕ ಬ್ಯಾಂಕ್‌ನಿಂದ 1.40 ಲಕ್ಷ ರೂ ಹೈಮಾಸ್ಟ್‌ ದೀಪ ಕೊಡುಗೆ

ಸಿದ್ದಾಪುರ: ಸಿದ್ದಾಪುರ ಗ್ರಾಮ ಪಂಚಾಯತ್‌ಗೆ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾದ ನೂತನ ಬಸ್‌ ತಂಗುದಾಣಕ್ಕೆ ಕರ್ಣಾಟಕ ಬ್ಯಾಂಕ್‌ ವತಿಯಿಂದ 1.40 ಲಕ್ಷ ರೂ. ವೆಚ್ಚದಲ್ಲಿ ಹೈಮಾಸ್ಟ್‌ ದೀಪವನ್ನು ಕೊಡುಗೆಯಾಗಿ ನೀಡಲಾಯಿತು.

ಈ ಹೈಮಾಸ್ಟ್‌ ದೀಪವನ್ನು ಕರ್ಣಾಟಕ ಬ್ಯಾಂಕ್‌ನ ಉಪ ಮಹಾಪ್ರಭಂದಕ ಎಚ್‌.ಪಿ. ರವೀಂದ್ರನಾಥ ಹಂದೆ ಉದ್ಘಾಟಿಸಿದರು.

ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ, ವಿಧಾನ ಪರಿಷತ್‌ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ತಾ. ಪಂ. ಅಧ್ಯಕ್ಷ ಭಾಸ್ಕರ್‌ ಬಿಲ್ಲವ, ಜಿ. ಪಂ. ಸದಸ್ಯೆ ಮಮತಾ ಆರ್‌. ಶೆಟ್ಟಿ, ಸಿದ್ದಾಪುರ ಗ್ರಾ. ಪಂ. ಅಧ್ಯಕ್ಷ ಯು. ಸುಧಾಕರ ಶೆಟ್ಟಿ, ತಾ. ಪಂ. ಸದಸ್ಯರಾದ ಲಲಿತಾ ಶೆಟ್ಟಿ, ಪಾರ್ವತಿ ಕುಲಾಲ, ಪ್ರದೀಪ ಕುಮಾರ ಶೆಟ್ಟಿ ಗುಡಿಬೆಟ್ಟು, ಸಿದ್ದಾಪುರ-ಹೊಸಂಗಡಿ, ರೋಟರಿ ಅಧ್ಯಕ್ಷ ಡಾ| ಜಗದೀಶ ಶೆಟ್ಟಿ, ತಾ. ಪಂ. ಕಾರ್ಯನಿರ್ವಾಣಾಧಿಕಾರಿ ಎಡೋಲ#ಸ್‌ ಫೆರ್ನಾಂಡಿಸ್‌, ಲೋಕೋಪಯೋಗಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಕೆ.ಎಸ್‌. ಚಂದ್ರಶೇಖರ, ವಂಡ್ಸೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್‌. ಸಂಜೀವ ಶೆಟ್ಟಿ, ಗ್ರಾ. ಪಂ. ಉಪಾಧ್ಯಕ್ಷೆ ಶ್ಯಾಮಲ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಸತೀಶ್‌ ನಾಯ್ಕ, ಕಾರ್ಯದರ್ಶಿ ಶ್ರೀಧರ ಕಾಮತ್‌, ಕರ್ಣಾಟಕ ಬ್ಯಾಂಕ್‌ನ ಸಿದ್ದಾಪುರ ಶಾಖಾ ವ್ಯವಸ್ಥಾಪಕ ನಾಗೇಂದ್ರ ಭಟ್‌ ಮತ್ತು ಮೊದಲಾದವರು ಉಪಸ್ಥಿತರಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com