ಕನ್ನಡ ಡಿಂಡಿಮ: ಕನ್ನಡ ಕೃಷಿ- ಮಾತುಕತೆ

ಕುಂದಾಪುರ: ಜಾಗತೀಕರಣ, ನಗರೀಕರಣದ ಪ್ರಭಾವದಿಂದಾಗಿ ಭಾಷೆ ಪ್ರೀತಿಸುವ ಕೆಲಸ ಕಡಿಮೆ ಆಗುತ್ತಿದೆ. ಅದರ ಪ್ರಭಾರ ದಕ್ಷಿಣ ಭಾರತದಲ್ಲಿಯೇ ಹೆಚ್ಚಿದೆ. ಭಾಷೆ, ಸಂಸ್ಕೃತಿ ಏನಾದರೂ ಉಳಿದಿದ್ದರೆ ಅದು ಲೋಕ ವಿಶ್ವವಿದ್ಯಾನಿಲಯದ ಪ್ರತಿನಿಧಿಗಳಿಂದ ಮಾತ್ರ ಎಂದು ಲೇಖಕ ನರೇಂದ್ರ ರೈ ದೇರ್ಲ ಅಭಿಪ್ರಾಯಪಟ್ಟರು. 

ನಗರದ ರೋಟರಿ ಕಲಾಮಂದಿರದಲ್ಲಿ ಕನ್ನಡ ವೇದಿಕೆ ಆಶ್ರಯದಲ್ಲಿ ಜರುಗಿದ ಕನ್ನಡ ಕೃಷಿ- ಮಾತುಕತೆ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು. 

ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಸಮಾಜ ಸುಧಾರಕರ ಪ್ರತಿಮೆ ನೋಡಬಹುದು. ಆದರೆ ಎಲ್ಲಿಯೂ ಕಷಿಕನ ಪ್ರತಿಮೆ ಕಾಣಲು ಸಾಧ್ಯವಿಲ್ಲ. ಕಷಿ ವಿಶ್ವವಿದ್ಯಾನಿಲಯದಿಂದ ಕಷಿ ತಜ್ಞ ಹುಟ್ಟಬಹುದೇ ಹೊರತು ಕಷಿಕನಲ್ಲ. ಅಕ್ಷರದ ಗಂಧವಿಲ್ಲದ ಅನೇಕರು ಕಷಿ ಸಂಸ್ಕೃತಿಯ ಮೂಲಕ ಭಾಷೆ, ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಭಾಷಾ, ಸಂಸ್ಕೃತಿಯ ಅಭಿಮಾನ ನೋಡಬಹುದು. ಆದರೆ ಕರ್ನಾಟಕ ಇದರಿಂದ ವಿಮುಖ ಆಗಿದೆ ಎಂದು ಅವರು ಹೇಳಿದರು.

ಇತಿಹಾಸ ಉಪನ್ಯಾಸಕ ಡಾ.ರಾಮದಾಸ ಪ್ರಭು ಅತಿಥಿಗಳಾಗಿದ್ದರು.

ಹಳ್ನಾಡು ಪ್ರತಾಪಚಂದ್ರ ಶೆಟ್ಟಿ ಸಮನ್ವಯಕಾರರಾಗಿದ್ದರು. ಶಿಕ್ಷಕಿ ಉಷಾ ಸುಕುಮಾರ ವಿಷಯ ಮಂಡಿಸಿ ದರು. ಕನ್ನಡ ವೇದಿಕೆ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಕನ್ನಡ ಪತ್ರಿಕೆಗಳ ವಿತರಕರಾದ ಮಹಮದ್ ಗೌಸ್, ಶಂಕರ ಆಚಾರ್ಯ, ಮಹಮದ್ ಖಾಜಿ ಅವರಿಗೆ ನುಡಿಗೌರವ ಸಲ್ಲಿಸಿ ಸನ್ಮಾನಿಸಲಾಯಿತು. ಉಪನ್ಯಾಸಕ ವಿಶ್ವನಾಥ ಕರಬ ಕಾರ‌್ಯಕ್ರಮ ನಿರ್ವಹಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com