ಶ್ರೀ ಸೀತಾರಾಮಚಂದ್ರ ದೇವಸ್ಥಾನ ಪುನಃ ಪ್ರತಿಷ್ಠಾಪನೆ, ಕುಂಭಾಭಿಷೇಕ

ಕುಂದಾಪುರ: ಆತ್ಮದ ಶುದ್ದಿಗೆ ಜ್ಞಾನ ಮಾರ್ಗದರ್ಶನ ಮಾಡುತ್ತದೆ. ನ್ಯಾಯ, ನೀತಿ, ಧರ್ಮ ಸಾರ್ವಕಾಲಿಕ ಸತ್ಯ. ಅಧರ್ಮದಲ್ಲಿ ನಡೆಯುವುದರಿಂದ ಕೇವಲ ಕ್ಲೇಶಗಳು ಮಾತ್ರ ದೊರಕಲು ಸಾಧ್ಯ. ಸಮಾಜದ ಹಿತ ರಕ್ಷಣೆಗೆ ಉಳಿಸಿಕೊಂಡು ಬಂದಿರುವ ಗುರು-ಶಿಷ್ಯ ಸಂಬಂಧ ನಮ್ಮ ಪರಂಪರೆಯ ಶ್ರೇಷ್ಠ ದ್ಯೋತಕ ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ನುಡಿದರು.

ಅವರು ಕುಂದಾಪುರದ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಶುಕ್ರವಾರ ಸ್ಥಾಪನಾ ಬೆಳ್ಳಿ ಹಬ್ಬ ಸಂಭ್ರಮದ ಅಂಗವಾಗಿ ನಡೆದ ಶ್ರೀ ಸೀತಾರಾಮಚಂದ್ರ ದೇವರ ಪುನಃ ಪ್ರತಿಷ್ಠಾಪನಾ ಮತ್ತು ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಶ್ರೀ ದೇವರಿಗೆ ಕುಂಭಾಭೀಷೇಕ ನೆರವೇರಿಸಿ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆರ್ಶೀವಚನ ನೀಡಿದರು.

ಶಿಷ್ಯನ ಯಶಸ್ಸಿನ ಹಿಂದೆ ಗುರು

ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆ ಗುರುವಿನ ಮಾರ್ಗದರ್ಶನ ಇದ್ದೇ ಇರುತ್ತದೆ. ಶಿಷ್ಯನಲ್ಲಿನ ಒಳ್ಳೆಯ ವಿಚಾರ, ಸದ್ಗುಣಗಳನ್ನು ಗುರುತಿಸಿ ಅವರಿಗೆ ಮಾರ್ಗದರ್ಶನ ಮಾಡಿ ಉತ್ತಮ ದಾರಿಯಲ್ಲಿ ನಡೆಸುವ ಹಾಗೂ ನಿರಂತರ ಪ್ರೋತ್ಸಾಹಿಸುವ ಗುರು ಮಾತ್ರ ಸದ್ಗುರು ಆಗುತ್ತಾರೆ ಎಂದು ಅವರು ಹೇಳಿದರು.

ಶೃಂಗೇರಿ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಡಾ| ಎಚ್‌.ವಿ. ನರಸಿಂಹಮೂರ್ತಿ, ಶ್ರೀ ಮಠದ ಅಧಿಕಾರಿ ಕೃಷ್ಣಮೂರ್ತಿ, ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣ, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಪುರಸಭಾ ಉಪಾಧ್ಯಕ್ಷ ನಾಗರಾಜ್‌ ಕಾಮಧೇನು, ಚಂದ್ರಶೇಖರ ಕಲ್ಪತರು, ಎನ್‌.ವಿ. ರಾಘವೇಂದ್ರ ರಾವ್‌, ಶೇಷಯ್ಯ ಕೋತ್ವಾಲ್‌, ರಮಾನಾಥ ನಾಯ್ಕ, ವಿಶ್ವನಾಥ ಹವಾಲ್ದಾರ್‌, ಕೆ. ರಾಮಚಂದ್ರ ಮಂಗಳೂರು, ದೇವಕಿ ಪಿ. ಸಣ್ಣಯ್ಯ, ದೇವರಾಯ ಬಾಣನ ಮನೆ, ಪುರಸಭಾ ಸದಸ್ಯ ರಾಜೇಶ್‌ ಕಾವೇರಿ, ಲಕ್ಷೀಶ ಹವಾಲ್ದಾರ್‌, ಅಶೋಕ ಬೆಟ್ಟಿನ್‌, ಜಿ. ಪ್ರಭಾಕರ, ಮೋಹಿನಿ ಶಂಕರ ಹವಲ್ದಾರ್‌, ಬೆಂಗಳೂರಿನ ಉದ್ಯಮಿ ಎನ್‌.ವಿ. ದಿನೇಶ್‌ ನೇರಂಬಳ್ಳಿ ಮೊದಲಾದವರು ಉಪಸ್ಥಿತರಿದ್ದರು.

ದೇವಸ್ಥಾನದ ಪರವಾಗಿ ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣ ಅವರು ಶ್ರೀಗಳಿಗೆ ಭಿನ್ನವತ್ತಳೆ ನೀಡಿ ಗೌರವಿಸಿದರು.

ರಾಮಕ್ಷತ್ರೀಯ ಸಮಾಜದ ಅಧ್ಯಕ್ಷ ಸುರೇಶ್‌ ಬೆಟ್ಟಿನ್‌ ಸ್ವಾಗತಿಸಿದರು, ಪತ್ರಕರ್ತ ರಾಜೇಶ್‌ ಕೆ.ಸಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಕಾಶ್‌ ಬೆಟ್ಟಿನ್‌ ಅಭಿನಂದನಾ ಪತ್ರ ವಾಚಿಸಿದರು, ಡಿ.ಕೆ. ಪ್ರಭಾಕರ ಸಮ್ಮಾನಿತರ ವಿವರ ನೀಡಿದರು. ಬಿ. ರಾಧಾಕೃಷ್ಣ ನಾಯಕ್‌ ನಿರೂಪಿಸಿದರು, ರಾಮಕ್ಷತ್ರೀಯ ಯುವಕ ಮಂಡಲದ ನಿಯೋಜಿತ ಅಧ್ಯಕ್ಷ ಯು. ರಾಧಾಕೃಷ್ಣ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com