ಇಂದಿರಾ ಗಾಂಧಿ, ಸರ್ದಾರ್ ಪಟೇಲ್ ಸಂಸ್ಮರಣೆ

ಕುಂದಾಪುರ: ಇಂದು ಪ್ರಪಂಚದಲ್ಲೇ ಭಾರತ ಮುಂಚೂಣಿ ಸ್ಥಾನ ಪಡೆಯಲು ಮತ್ತು ಇಡೀ ಪ್ರಪಂಚದ ನೋಟ ಭಾರತದತ್ತ ಬೀರಲು ಉಕ್ಕಿನ ಮಹಿಳೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ನೆಹರೂ ಸಂಪುಟದಲ್ಲಿದ್ದ ದೇಶದ ಪ್ರಥಮ ಸಮರ್ಥ ಗೃಹ ಸಚಿವ, ಉಕ್ಕಿನ ಮನುಷ್ಯ ಬಿರುದಾಂಕಿತ ಸರ್ದಾರ್ ವಲ್ಲಭಬಾಯಿ ಪಟೇಲರ ದೃಢ ನಿಲುವು, ದೂರದರ್ಶಿತ್ವ ಮತ್ತು ಸಮರ್ಥ ಆಡಳಿತದಿಂದ ಸಾಧ್ಯವಾಗಿದೆ. ದೇಶಕ್ಕೆ ಈ ಇಬ್ಬರು ನಾಯ ಕರು ಕಾಂಗ್ರೆಸ್ ಪಕ್ಷದ ಅಪೂರ್ವ ಕೊಡುಗೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ. ಹಿರಿಯಣ್ಣ ಹೇಳಿದರು. 

ಶುಕ್ರವಾರ ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಜರುಗಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯತಿಥಿ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ, ಬ್ಯಾಂಕ್ ರಾಷ್ಟ್ರೀಕರಣ, ಭೂ ಮಸೂದೆ ಕಾನೂನು, ಇಪ್ಪತ್ತು ಅಂಶಗಳ ಕಾರ್ಯಕ್ರಮ ಮುಂತಾದ ಜನಪರ ಕಾರ್ಯಕ್ರಮಗಳ ಸಮರ್ಥ ಅನುಷ್ಠಾನದಿಂದ ಇಂದಿರಾ ಗಾಂಧಿ ದೇಶದ ಬೆಳವಣಿಗೆ ದಿಕ್ಕನ್ನು ಅಭಿವೃದ್ಧಿಯತ್ತ ಕೊಂಡೊಯ್ದರು ಮತ್ತು ಸರ್ದಾರ್ ಪಟೇಲರು ದೇಶದ ಪ್ರಥಮ ಗೃಹ ಸಚಿವರಾಗಿ ತೆಗೆದುಕೊಂಡ ಹಲವು ನಿರ್ದಾಕ್ಷಿಣ್ಯ ನಿರ್ಧಾರಗಳು ಇಂದಿನ ಭಾರತೀಯ ಪ್ರಜೆಗಳ ನೆಮ್ಮದಿಯ ಬದುಕಿಗೆ ಅಡಿಪಾಯವಾಗಿದೆ ಎಂದರು. 

ಹಿರಿಯ ಕಾಂಗ್ರೆಸಿಗರಾದ ಜಾಕೂಬ್ ಡಿಸೋಜಾ, ಶಿವಾನಂದ ಕೆ., ರಂಗನಾಥ ಭಟ್ಟ, ಬುದ್ಧರಾಜ ಶೆಟ್ಟಿ, ವಿಠಲ ಕಾಂಚನ್, ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೇರೆಗಾರ್, ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಪುರಸಭೆ ಸದಸ್ಯ ಶ್ರೀಧರ್ ಶೇರೆಗಾರ್, ಪ್ರಭಾಕರ ಕೋಡಿ, ಶಕುಂತಲಾ ಗುಲ್ವಾಡಿ, ದೇವಕಿ ಸಣ್ಣಯ್ಯ, ಚಂದ್ರ ಅಮೀನ್, ಶಿವರಾಮ ಪುತ್ರನ್, ಕೇಶವ ಭಟ್ಟ, ವಿದ್ಯಾದರ ಕೆ.ವಿ., ಆಶಾ ಕರ್ವೆಲ್ಲೊ, ಶೋಭಾ ಸಚ್ಚಿದಾನಂದ, ಸಂದೇಶ್ ಕೋಡಿ ಮುಂತಾದವರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ನಾರಾಯಣ ಆಚಾರ್ ಸ್ವಾಗತಿಸಿದರು. ನಗರ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ತಾ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com