ಪೊಲೀಸ್ ವಸತಿಗೃಹ ಕಾಮಗಾರಿಗೆ ಶಿಲಾನ್ಯಾಸ

ಕುಂದಾಪುರ: ಪೊಲೀಸ್ ಹೌಸಿಂಗ್ ಕಾರ್ಪೊರೇಶನ್ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಕುಂದಾಪುರ ಪೊಲೀಸರ ವಸತಿಗೃಹ ನಿರ್ಮಾಣ ಕಾಮಗಾರಿಗೆ ಕುಂದಾಪುರ ಡಿವೈಎಸ್ಪಿ ಸಿ. ಬಿ. ಪಾಟೀಲ್ ಶಿಲಾನ್ಯಾಸ ನೆರವೇರಿಸಿದರು.ಶಿಲಾನ್ಯಾಸ ನೆರವೇರಿಸಲಾಯಿತು.

 ಬಳಿಕ ಮಾತನಾಡಿದ ಅವರು ಸಿಬ್ಬಂದಿಗಳಿಗಾಗಿ 11.5 ಕೋಟಿ ರೂಪಾಯಿ ವೆಚ್ಚದಲ್ಲಿ 2 ವಸತಿ ಸಮುಚ್ಚಯಗಳು ನಿರ್ಮಾಣವಾಗಲಿದ್ದು, ಕಟ್ಟಡದಲ್ಲಿ ಆರು ಬ್ಲಾಕ್‌ಗಳಿರುತ್ತದೆ. ಪ್ರತೀ ಬ್ಲಾಕ್‌ಗಳಲ್ಲಿ 12 ವಸತಿ ಗೃಹಗಳಂತೆ ಒಟ್ಟು 76 ವಸತಿ ಗೃಹಗಳಿರುತ್ತವೆ. ಉಪನಿರೀಕ್ಷಕರಿಗಾಗಿ ನಿರ್ಮಾಣಗೊಳ್ಳುವ ಸಮುಚ್ಚಯದಲ್ಲಿ ಆರು ವಸತಿ ಗೃಹಗಳಿರುತ್ತದೆ ಎಂದರು.

ಕುಂದಾಪುರ ವೃತ್ತ ನಿರೀಕ್ಷಕ ಪಿ. ಎಂ. ದಿವಾಕರ, ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್, ಪೊಲೀಸ್ ಹೌಸಿಂಗ್ ಕಾರ್ಪೋರೇಶನ ಸಹಾಯಕ ಮುಖ್ಯ ಎಂಜಿನಿಯರ್ ಸಂತೊಷ್ ಕುಮಾರ್ ಉಲ್ಲಾಳ, ಮಂಜುಶ್ರೀ ಕನ್‌ಸ್ಟ್ರಕ್ಷನ್‌ನ ವ್ಯವಸ್ಥಾಪಕ ಎಚ್. ದಯಾನಂದ ಶೆಟ್ಟಿ, ಪ್ರಥಮ ದರ್ಜೆ ಗುತ್ತಿಗೆದಾರ ಮಾರ್ಕೋಡು ಸುಧೀರ್‌ಕುಮಾರ್ ಶೆಟ್ಟಿ, ಉಪನಿರೀಕ್ಷಕರಾದ ನಾಸಿರ್ ಹುಸೇನ್, ಇಮ್ರಾನ್ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com