ನಂದಿತಾಳ ಹತ್ಯೆ: ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ

ಕುಂದಾಪುರ: ತೀರ್ಥಹಳ್ಳಿಯಲ್ಲಿ ಮೃತಪಟ್ಟ ಹುಡುಗಿ ನಂದಿತಾಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ, ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿ ಇಲ್ಲಿನ ವಿಶ್ವ ಹಿಂದೂ ಪರಿಷತ್, ಬಂಜರಂಗದಳ ಕುಂದಾಪುರ ಹಾಗೂ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಯಿತು.  
   ಪ್ರತಿಭಟನೆಯ ನೇತೃತ್ವ ವಹಿಸಿದ್ದ ಉಡುಪಿ ವಿಶ್ವ ಹಿಂದೂ ಪರಿಷತ್ ನ ಜಿಲ್ಲಾಧ್ಯಕ್ಷ ಸುಪ್ರಸಾದ್ ಶೆಟ್ಟಿ ಮಾತನಾಡಿ ಸಮಾಜಘಾತುಕ ಕೆಲಸಗಳಲ್ಲಿ ಭಾಗಿಯಾಗಿರುವವರು ಅನ್ಯಕೋಮಿನವರು ಎಂಬ ಕಾರಣಕ್ಕೆ ಇಂದಿನ ರಾಜ್ಯ ಸರಕಾರ ಅವರಿಗೆ ರಕ್ಷಣೆ ನೀಡುತ್ತಿದೆ. ಗೋ ಕಳ್ಳ ಮೃತಪಟ್ಟರೆ ಆತನ ಕುಟುಂಬವನ್ನು 10 ಲಕ್ಷ ನೀಡಿ, ತಂಡ ತಂಡವಾಗಿ ಹೋಗಿ ಸಾಂತ್ವನ ಹೇಳುವ ರಾಜ್ಯ ಸರಕಾರ ತೀರ್ಥಹಳ್ಳಿಯ ಹುಡುಗಿ ಮೃತಪಟ್ಟು ಇಷ್ಟು ದಿನ ಕಳೆದರೂ ಅತ್ತ ತಲೆ  ಕೆಲಸವನ್ನೂ ಮಾಡಿಲ್ಲ. 
      ಇನ್ನೆರಡು ದಿನಗಳ ಒಳಗೆ ಮೃತಳ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ನೀಡಬೇಕು ಮತ್ತು ಪ್ರಕರಣವನ್ನು ಸ್ವತಂತ್ರವಾಗಿ ತನಿಕೆ ನಡೆಸಲು ಸಿಐಡಿಗೆ ಅವಕಾಶ ನೀಡಬೇಕು ಇಲ್ಲವೇ ಸಿಬಿಐ ಗೆ ಒಪ್ಪಿಸಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಸಂಚಾಲಕರಾದ ಸುನಿಲ್ ಕೆ. ಆರ್, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನ ತಾಲೂಕು ಸಂಚಾಲಕ ಚೇತನ ಕುಮಾರ, ರಾಜ್ಯ ಬಿಜೆಪಿ ಮೀನುಗಾರಿಕಾ ಪ್ರಕೋಷ್ಠದ ಅಧ್ಯಕ್ಷರಾದ ಕಿರೋರ್ ಕುಮಾರ್,  ಕು. ತಾ. ಬಿಜೆಪಿ ಅಧ್ಯಕ್ಷರಾದ ರಾಜೇಶ್ ಕಾವೇರಿ, ಆರ್.ಎಸ್.ಎಸ್ ರಾಜ್ಯ ಕಾರ್ಯಕಾರಣಿ ಸದಸ್ಯ ಸುಬ್ರಹ್ಮಣ್ಯ ಹೊಳ್ಳ, ತಾ. ಪಂ. ಅಧ್ಯಕ್ಷ ಭಾಸ್ಕರ ಬಿಲ್ಲವ, ಪುರಸಭಾ ಸದಸ್ಯ ಮೋಹನದಾಸ ಶೆಣೈ, ಬಿಜೆಪಿ ಮಹಿಳಾ ಪ್ರಕೋಷ್ಠದ ಅದ್ಯಕ್ಷರು ಹಾಜರಿದ್ದರು.

 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com