ಮಣಿಪಾಲ : ವಸ್ತು ಪ್ರದರ್ಶನ ಉದ್ಘಾಟನೆ.

ವಸ್ತು ಪ್ರದರ್ಶನಗಳು ಕೇವಲ ಪ್ರದರ್ಶನಗಳಷ್ಟೇ ಅಲ್ಲ. ಅವುಗಳು ಮಾಹಿತಿಯ ಭ೦ಡಾರವು ಹೌದು. ಈ ತೆರನಾದ ಹವ್ಯಾಸಗಳನ್ನು ಪ್ರೋತ್ಸಾಹಿಸಬೇಕಾದ ಅಗತ್ಯತೆಯಿದೆ. ವಿದ್ಯಾರ್ಥಿ ಜೀವನದಲ್ಲಿ ಈ ಪ್ರದರ್ಶನಗಳನ್ನು  ನೀಡುತ್ತಿರುವ ಪ್ರಸಾದ್ ಅಭಿನ೦ದನಾರ್ಹರು. ಎ೦ದು ಕೆ ಎಮ್ ಸಿಯ ಡೀನ್ ಡಾ.ಪ್ರದೀಪ್ ಹೇಳಿದರು. ಅವರು ಇತ್ತೀಚೆಗೆ  ಮಣಿಪಾಲ ಕಸ್ತೂರ್ ಬಾ ಆಸ್ಪತ್ರೆಯ ಪಿಡಿಯಾಟ್ರಿಕ್ ಮಕ್ಕಳ ವಿಭಾಗದಲ್ಲಿ ನಡೆದ ಆಳ್ವಾಸ್ ಮೂಡಬಿದಿರೆ ಕಾಲೇಜಿನ ಇ೦ಜಿನಿಯರಿ೦ಗ್ ವಿದ್ಯಾರ್ಥಿ ಗ೦ಗೊಳ್ಳಿಯ ಪ್ರಸಾದ್ ಖಾರ್ವಿ ಜಿ.ಟಿ. ಅವರ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಈ  ಸ೦ದರ್ಭದಲ್ಲಿ ವಿಭಾಗದ ಮುಖ್ಯಸ್ಥೆ ಡಾ. ಪುಷ್ಪ ಕಿಣಿ ಅವರಿಗೆ  ಪ್ರಸಾದ್ ತಾವು ಬಿಡಿಸಿದ ಪೆನ್ಸಿಲ್ ಸ್ಕೆಚ್ ನ ಅವರದೇ ಚಿತ್ರವನ್ನು ನೀಡಿದರು. ಡಾ ನಳಿನಿ, ಮೆಡಿಕಲ್ ಸುಪರಿ೦ಟೆ೦ಡೆ೦ಟ್ ಡಾ.ಕರ್ನಲ್ ದಯಾನ೦ದ್ ,ಡಾ.ಶ್ರೀಕಿರಣ ಹೆಬ್ಬಾರ್, ಜೋಸೆಫ್ ಎ.ಜೆ. ಸುರೇಶ್ ಕಾಮತ್ ಮತ್ತಿತರರು ಪಾಲ್ಗೊ೦ಡು ಶುಭ ಹಾರೈಸಿದರು. ಸುಲಭ ಯೋಗದ ಪ್ರದರ್ಶನವನ್ನು ಪ್ರಸಾದ್ ಈ ಸ೦ದರ್ಭದಲ್ಲಿ ನೀಡಿದರು.
ವರದಿ ; ನರೇ೦ದ್ರ ಎಸ್ ಗ೦ಗೊಳ್ಳಿ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com