ಸ್ವ ಉದ್ಯೋಗ ತರಬೇತಿ ಕಾರ್ಯಾಗಾರ

ಹೆಮ್ಮಾಡಿ: ಗಾಣಿಗ ಸೇವಾ ಸಮಿತಿ ನಾಡ ಪಡುಕೋಣೆ ವಲಯ ಹಾಗೂ ರುಡ್ ಸೆಟ್  ಸಂಸ್ಥೆ ಹೇರೂರು ಬ್ರಹ್ಮಾವರ ಇವರ ಸಹಭಾಗಿತ್ವದಲ್ಲಿ ನಿರುದ್ಯೋಗ ಯುವಕ, ಯುವತಿಯರಿಗಾಗಿ ಸ್ವ ಉದ್ಯೋಗ ತರಬೇತಿ ಕಾರ್ಯಾಗಾರ ಮಂಗಳವಾರ ನಾಡದ ಶ್ರೀ ರಾಮ ಕೃಪಾ ಸಮುದಾಯ ಭವನದಲ್ಲಿ ಜರಗಿತು.
   ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಹೊಟೇಲ್ ಉದ್ಯಮಿ ಎನ್.ಸಂಜೀವ ರಾವ್, ಸ್ವ ಉದ್ಯೋಗದಿಂದ ವೈಯಕ್ತಿಕ ಅಭಿವೃದ್ಧಿಯಾಗುತ್ತದೆ ಹಾಗೂ ಅದರಿಂದ ಸಮಾಜಕ್ಕೆ ಅನುಕೂಲವಾಗುತ್ತದೆ ಎಂದರು. ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ ಜಿ.ಪಿ. ಪಡುಕೋಣೆ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಶುಭಾಶಂಸನೆಗೈದರು. ನಾಡ ಗ್ರಾಮ ಪಂಚಾಯತ್ ಅಧ್ಯಕ್ಷ ಎಚ್.ಪ್ರವೀಣಕುಮಾರ್ ಶೆಟ್ಟಿ, ತಾಪಂ ಸದಸ್ಯೆ ಲಕ್ಷ್ಮೀ ಮೆಂಡನ್, ರತ್ನಾ ಸಂಜೀವ ರಾವ್ ಬೆಂಗಳೂರು, ದ.ಕ.ಜಿಲ್ಲಾ ಸೋಮಕ್ಷತ್ರಿಯ ವೈಷ್ಣವ ಸಮಾಜದ ಬೆಂಗಳೂರು ಗೌರವಾಧ್ಯಕ್ಷ ಬಿ.ಎಸ್.ಮಂಜುನಾಥ, ಅಧ್ಯಕ್ಷ ಎಚ್.ಟಿ.ನರಸಿಂಹ, ಶ್ರೀ ವೇಣುಗೋಪಾಲಕೃಷ್ಣ ಕೋ.ಆಪ್ ಸೊಸೈಟಿ ಅಧ್ಯಕ್ಷ ಎಂ.ಗೋಪಾಲಕೃಷ್ಣ, ಬಿ.ಶಂಕರ, ಯು.ಎ.ರಘುನಾಥ, ಗಣೇಶ ಜಿ. ಚಲ್ಲೆಮಕ್ಕಿ, ಜಿ.ಆರ್.ಚಂದ್ರಯ್ಯ ಉಪಸ್ಥಿತರಿದ್ದರು. ಬ್ರಹ್ಮಾವರ ರುಡ್ಸೆಟ್ನ ದಿವಾಕರ ಭಟ್, ರುಡ್ಸೆಟ್ನ ಉಪನ್ಯಾಸಕ ಕರುಣಾಕರ ಜೈನ್, ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮದ ಸಿದ್ಧಮಲ್ಲಪ್ಪ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಸಮಿತಿಯ ಅಧ್ಯಕ್ಷ ವೆಂಕಟರಮಣ ಗಾಣಿಗ ನಾಡಾ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ ಗಾಣಿಗ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಸತೀಶ ಗಾಣಿಗ ಗುಡ್ಡಮ್ಮಾಡಿ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com