ಕುಂದಾಪುರ: ರಾಜ್ಯೋತ್ಸವ ಆಚರಣೆ

ಕುಂದಾಪುರ: ಕನ್ನಡ ನಾಡು ನುಡಿ ಗೌರವಿಸುವ ಜತೆಗೆ ಎಲ್ಲ ಭಾಷೆ, ಸಮುದಾಯ ಪ್ರೀತಿಸುವ ವಿಶಿಷ್ಟ ನಾಡೊಂದಿದ್ದರೆ ಅದು ಕರು ನಾಡು. ಜಾತಿಮತ ಪಂಥ ಬಡವ ಬಲ್ಲಿದ ಎಂಬ ಬೇಧವಿಲ್ಲದೆ ಈ ವಿಶಿಷ್ಟ ನಾಡಿನ ಪ್ರಗತಿಗೆ ಸರ್ವರು ಕೈಜೋಡಿಸಬೇಕು ಎಂದು ಕುಂದಾಪುರ ಸಹಾಯಕ ಕಮಿಷನರ್ ಚಾರುಲತಾ ಸೋಮಲ್ ಮನವಿ ಮಾಡಿದರು. ಶನಿವಾರ ಇಲ್ಲಿನ ಗಾಂಧಿ ಮೈದಾನದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು. 

ಕನ್ನಡ ನುಡಿ, ನಡೆ ಎಲ್ಲೆಡೆ ಬಳಕೆಯಾ ಗಬೇಕು. ತನ್ಮೂಲಕ ನಮ್ಮ ಸಂಸ್ಕೃತಿ ಎತ್ತಿ ಹಿಡಿಯಬೇಕು ಎಂದು ಅವರು ಹೇಳಿದರು. ಮುಖ್ಯ ಅತಿಥಿ, ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ದೇಶದಲ್ಲಿಯೇ ಕರ್ನಾಟಕ ವಿಶಿಷ್ಟ ರಾಜ್ಯ. ದೇಶಕ್ಕೆ ಮಹತ್ತರ ಕೊಡುಗೆ ನೀಡಿದ ನಾಡಿದು ಎಂದರು. 

ಕುಂದಾಪುರ ತಾಲೂಕು ಪಂಚಾಯಿತಿ ಅಧ್ಯಕ್ಷ ಭಾಸ್ಕರ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಯು.ಎಸ್.ಕಲಾವತಿ, ಕುಂದಾಪುರ ಡಿವೈಎಸ್ಪಿ ಸಿ.ಬಿ.ಪಾಟೀಲ್, ಕುಂದಾ ಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್, ಜಿ.ಪಂ.ಸದಸ್ಯ ಗಣಪತಿ ಟಿ.ಶ್ರೇಯಾನ್, ಪಿಡಬ್ಲೂಡಿ ಎಂಜಿನಿಯರ್ ಚಂದ್ರಶೇಖರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗೋಪಾಲ ಶೆಟ್ಟಿ, ಪುರಸಭೆ ಸದಸ್ಯರಾದ ರಾಜೇಶ್ ಕಾವೇರಿ, ಶ್ರೀಧರ ಶೇರೆಗಾರ್, ಶಕುಂತಲಾ ಗುಲ್ವಾಡಿ, ಪುಷ್ಪಾ ಶೇಟ್, ತಾಲೂಕು ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ದಿನಕರ ಹೆಗ್ಡೆ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಶೆಟ್ಟಿ, ತಾ.ಪಂ. ಸದಸ್ಯ ಪ್ರದೀಪ್‌ಕುಮಾರ ಶೆಟ್ಟಿ ಉಪಸ್ಥಿತರಿದ್ದರು. 

ತಹಸೀಲ್ದಾರ್‌ ಗಾಯತ್ರಿ ಎನ್.ನಾಯಕ್ ಸ್ವಾಗತಿಸಿದರು. ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ನಾಡಗೀತೆ, ರೈತಗೀತೆ ಗಾಯನ, ಆರಕ್ಷಕ, ಎನ್‌ಸಿಸಿಯನ್ನೊಳಗೊಡ ಆಕರ್ಷಕ ಪಥಸಂಚಲನ, ನಾಡಿನ ಹಿರಿಮೆ ಸಾರುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com