ಶರಣ್ ಶೆಟ್ಟಿ ಕೊಲೆ ಆರೋಪಿಗಳ ಬಿಡುಗಡೆ

ಕುಂದಾಪುರ: ತಾಲೂಕಿನ ಆನಗಳ್ಳಿ ರಸ್ತೆಯ ಸೈಮನ್ ಕಂಫರ್ಟ್ ವಸತಿಗಹದಲ್ಲಿ ಶರಣ್‌ಕುಮಾರ ಶೆಟ್ಟಿ (22) ಎಂಬಾತನನ್ನು ಚೂರಿಯಿಂದ ತಿವಿದು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ ಭರತ್‌ಕುಮಾರ್(23) ಹಾಗೂ ಪ್ರದೀಪ ಮೊಗವೀರ ಯಾನೆ ಗುಂಡಾ ಬಿಡುಗಡೆಗೊಂಡಿದ್ದಾರೆ. 
ಮೃತ ಶರಣ್ ಬಿಕಾಂ ವಿದ್ಯಾರ್ಥಿಯಾಗಿದ್ದು , ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಪೂರ್ವದ್ವೇಷದಿಂದ ಆರೋಪಿಗಳು 2012ರ ಮಾ.20ರಂದು ರಾತ್ರಿ 12.20ರ ಸುಮಾರಿಗೆ ಹತ್ಯೆಗೈದಿದ್ದರು ಎಂದು ಆರೋಪಿಸಲಾಗಿತ್ತು. ಮೃತ ಶರಣ್ ಕಾಲೇಜೊಂದರ ಪ್ರಿನ್ಸಿಪಾಲರನ್ನು ಬ್ಲ್ಯಾಕ್‌ಮೇಲ್ ಮಾಡಿದ ಆರೋಪ ಎದುರಿಸುತ್ತಿದ್ದ. ಕುಂದಾಪುರ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. 
ಪ್ರಕರಣದ ವಿಚಾರಣೆ ನಡೆಸಿದ ಕುಂದಾಪುರ ಹೆಚ್ಚುವರಿ ಜಿಲ್ಲಾ ಹಾಗೂ ಸೆಶನ್ಸ್ ನ್ಯಾಯಾಧೀಶ ರಾಜಶೇಖರ ವೆಂಕನಗೌಡ ಪಾಟೀಲ್ ಆರೋಪಿಗಳ ವಿರುದ್ಧ ಮಾಡಲಾದ ಆರೋಪಗಳು ಸಾಕ್ಷ್ಯಾಧಾರಗಳಿಂದ ರುಜುವಾತಾಗಿಲ್ಲವೆಂದು ಮನಗಂಡು ಬಿಡುಗಡೆಗೊಳಿಸಿದ್ದಾರೆ. ಆರೋಪಿಗಳ ಪರ ಕುಂದಾಪುರ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com