ಘರ್ ಘರ್ ಕೊಂಕಣಿ: ಓಂ ಗಣೇಶ ಗೆ ಕೊಂಕಣಿ ವಿಭೂಷಣ ಪ್ರಶಸ್ತಿ ಪ್ರಧಾನ

ಎಣ್ಣೆಹೊಳೆ: ಹಿರ್ಗಾನ್ ಕಾರ್ಕಳದ  ಗೋಕುಲದಾಸರ ನಿವಾಸದಲ್ಲಿ ನಡೆದ ಘರ್ ಘರ್ ಕೊಂಕಣಿ ಕಾರ್ಯಕ್ರಮದಲ್ಲಿ ಕೊಂಕಣಿ ಭಾಷೆಗಾಗಿ ಶ್ರಮಿಸಿದ ಚಲನಚಿತ್ರ ನಟ, ಅಂತರಾಷ್ಟ್ರೀಯ ಜಾದೂಗಾರ ಓಂ ಗಣೇಶ ಉಪ್ಪುಂದ ಇವರನ್ನು ಕೊಂಕಣಿ ವಿಭೂಷಣ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ಟಲೀನೊ, ಉಡುಪಿ ಜಿ.ಪಂ ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್, ಉಡುಪಿ ಅನಂತ ವೈದಿಕ ಕೇಂದ್ರ ಸಂಸ್ಥಾಪಕ ಚೇಂಪಿ ರಾಮಚಂದ್ರ ಭಟ್, ದಿನೇಶ ಪ್ರಭು, ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಅಧ್ಯಕ್ಷ ವಸಂತ ನಾಯಕ್,ಜಿ.ಎಸ್.ಬಿ.ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿವೇಕಾನಂದ ಶೆಣೈ, ಸ್ಥಳೀಯ ಗ್ರಾ.ಪಂ ಅಧ್ಯಕ್ಷ ಆಂತೋನಿ.ಡಿ.ಸೋಜಾ,ಕೋಡಿಯಾಲ್ ಖಬರ್ ಪತ್ರಿಕೆ ಸಂಪಾದಕ ವೆಂಕಟೇಶ ಬಾಳಿಗಾ,ಸಂಘಟಕಾ ಗೋಕುಲ್ ದಾಸ್ ನಾಯಕ್ ಹಾಜರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com