ಪ್ರಧಾನಿ ಮೋದಿ ಕಾರ್ಯಾಲಯದಲ್ಲಿ ಹೈ ಸ್ಪೀಡ್ ಇಂಟರ್‍ನೆಟ್

ಡಿಜಿಟಲ್ ಇಂಡಿಯಾದ ಕನಸು ಕಾಣುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯಲ್ಲಿರುವ ಇಂಟರ್‍ನೆಟ್ ಸ್ಪೀಡ್ ಎಷ್ಟು ಎನ್ನುವುದು ಇದೀಗ ಬಹಿರಂಗವಾಗಿದೆ. ಭಾರತದಲ್ಲಿ ಸರಾಸರಿ ಇಂಟರ್‍ನೆಟ್ ಸ್ಪೀಡ್ 2 ಎಂಬಿಪಿಎಸ್(ಮೆಗಾಬೈಟ್ಸ್ ಪರ್ ಸೆಕೆಂಡ್)ಇದ್ದರೆ ಪ್ರಧಾನಿ ಕಾರ್ಯಾಲಯಲ್ಲಿ 34 ಎಂಬಿಎಸ್ ಇಂಟರ್‍ನೆಟ್ ಸ್ಪೀಡ್ ಇದೆ.
    ಚೆನ್ನೈನ ಮಾಹಿತಿ ಹಕ್ಕು ಕಾರ್ಯಕರ್ತ ವಿನಿತ್ ರಂಗನಾಥ್ ಆರ್‍ಟಿಐ ಅಡಿಯಲ್ಲಿ ಪ್ರಶ್ನೆ ಕೇಳಿದ್ದು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ) ಪ್ರಧಾನಿ ಕಾರ್ಯಾಲಯದಲ್ಲಿ  34 ಎಂಬಿಪಿಎಸ್ ವೇಗದಲ್ಲಿ ಇಂಟರ್‍ನೆಟ್ ಸಂಪರ್ಕ ಇದೆ ಎಂದು ತನ್ನ ಉತ್ತರದಲ್ಲಿ ತಿಳಿಸಿದೆ.
     ಪ್ರಧಾನಿ ಕಾರ್ಯಾಲಯದ ಟ್ಟಿಟ್ಟರ್ ಖಾತೆಯನ್ನು ನೋಡಿಕೊಳ್ಳಲು ಯಾವುದೇ ಹಣವನ್ನು ಖರ್ಚು ಮಾಡುವುದಿಲ್ಲ. ಅಷ್ಟೇ ಅಲ್ಲದೇ ಕಾರ್ಯಾಲಯದ ಸಿಬ್ಬಂದಿ ವಿಂಡೋಸ್ 7 ಮತ್ತು ವಿಂಡೋಸ್ 8 ಆಪರೇಟಿಂಗ್ ಸಿಸ್ಟಂ ಇರುವ ಕಂಪ್ಯೂಟರ್ ಬಳಸುತ್ತಿದ್ದಾರೆ ಎನ್ನುವ ಎನ್ನುವ ಅಂಶ ಆರ್‍ಟಿಐ ಪ್ರಶ್ನೆಯಿಂದ ಗೊತ್ತಾಗಿದೆ.
ಕಳೆದ ಐದು ವರ್ಷದಲ್ಲಿ ಎಷ್ಟು ಕಂಪ್ಯೂಟರ್‍ಗಳು ಹ್ಯಾಕ್ ಆಗಿದೆ ಎನ್ನುವ ಪ್ರಶ್ನೆಯನ್ನು ಕೇಳಲಾಗಿತ್ತು. ಆದರೆ ಈ ಪ್ರಶ್ನೆಗೆ ಎನ್ಐಸಿ ಯಾವುದೇ ಉತ್ತರವನ್ನು ನೀಡಿಲ್ಲ.
  ಅಕ್ಮೈ ವರದಿಯಂತೆ ವೇಗದ ಇಂಟರ್‍ನೆಟ್ ಸಂಪರ್ಕ ಪಡೆಯುವ ದೇಶಗಳ ಪಟ್ಟಿಯಲ್ಲಿ ಭಾರತ 115 ಸ್ಥಾನ ಪಡೆದಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com