‘ಕೊಡಚಾದ್ರಿ-ಸೌಪರ್ಣಿಕಾ ಉಳಿಸಿ’. ಶ್ರೀ ಈಶ ವಿಠಲದಾಸ ಸ್ವಾಮೀಜಿ ಉಪವಾಸ ಸತ್ಯಾಗ್ರಹ

ಕೊಲ್ಲೂರು: ಕೊಡಚಾದ್ರಿ ಪರಸರ ಸಂರಕ್ಷಣಾ ಟ್ರಸ್ಟ್, ಪರಶುರಾಮ ಸೇನೆ ಕೊಲ್ಲೂರು, ಹಿಂದೂ ಪರ ಸಂಘಟನೆಗಳು ಹಾಗೂ ಇನ್ನಿತರ ಸಂಘಟನೆಗಳ ಆಶ್ರಯದಲ್ಲಿ ಕೇಮಾರು ಸಾಂದೀಪನಿ ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ ನೇತೃತ್ವದಲ್ಲಿ ‘ಕೊಡಚಾದ್ರಿ-ಸೌಪರ್ಣಿಕಾ ಉಳಿಸಿ’ ಉಪವಾಸ ಸತ್ಯಾಗ್ರಹವನ್ನು ನವೆಂಬರ್ 9ರ ಭಾನುವಾರ ಸೂರ್ಯೋದಯದ ವೇಳಗೆ  ಸೌಪರ್ಣಿಕಾ ನದಿಗೆ ಬಾಗಿನ ಮತ್ತು ಪೂಜೆ ಸಲ್ಲಿಸಿ ಒಂದು ದಿನದ ಸಾಂಕೇತಿಕ ಉಪವಾಸ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.               ಸೌಪರ್ಣಿಕಾ ನದಿಯ ನೀರು ಕೊಲ್ಲೂರಿನ  ಪ್ರವಾಸಿ ಮಂದಿರಗಳು ಹಾಗೂ ಹೋಟೆಲ್‌ಗಳು ಕೊಳಕು ನೀರು ಮತ್ತು ಶೌಚಾಲಯ ತ್ಯಾಜ್ಯದಿಂದ ವಿಷಮಯಗೊಳ್ಳುತ್ತಿದೆ. ಕೊಡಚಾದ್ರಿಯಲ್ಲಿ 64 ತೀರ್ಥಗಳು ಹಾಗೂ 64 ಗಿಡಮೂಲಿಕೆಗಳಿದ್ದು ಇದರ ರಕ್ಷಣೆ ನಮ್ಮ  ಸಮಾಜದ ಕರ್ತವ್ಯವಾಗಿದೆ. ಈ ಕುರಿತು ಜನಜಾಗೃತಿ ಮತ್ತು ಪ್ರತಿಭಟನೆಯ ರೂಪದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲು ಒತ್ತಾಯಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. 


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com