ಶೃಂಗೇರಿ ಶ್ರೀಗಳ ಪುರಪ್ರವೇಶ

ಕುಂದಾಪುರ:  ನ.26ರ ಸಂಜೆ 5.30ಕ್ಕೆ ಶೃಂಗೇರಿಯಿಂದ ಆಗಮಿಸಲಿರುವ ಜಗದ್ಗುರುಗಳನ್ನು ಕುಂದೇಶ್ವರ ಸ್ವಾಗತ ಮಂಟಪದ ಬಳಿ ವೇದ-ವಾದ್ಯ ಘೋಷ ಮತ್ತು ಪೂರ್ಣಕುಂಭದೊಂದಿಗೆ ವಿಧ್ಯುಕ್ತವಾಗಿ ಸ್ವಾಗತಿಸಿ, ಮೆರವಣಿಗೆಯಲ್ಲಿ ಕರೆದೊಯ್ದು, ಸಾರ್ವಜನಿಕ ನೆಲೆಯಲ್ಲಿ ಗುರುವಂದನೆ ಸಲ್ಲಿಸಲಾಗುವುದು.  
     ಅನಂತರ ಜಗದ್ಗುರುಗಳು ಧಾರ್ಮಿಕ ಪ್ರವಚನ ನೀಡಿ, ಆಶೀರ್ವದಿಸಿ, 8.30ರಿಂದ ದೇವಾಲಯದ 'ಶ್ರೀಭಾರತೀ ತೀರ್ಥ ಕೃಪಾ' ಭವನದಲ್ಲಿ ತಮ್ಮ ಆರಾಧ್ಯ ದೇವತೆಗಳಾದ ಶ್ರೀಶಾರದಾಚಂದ್ರಮೌಳೀಶ್ವರ ಪೂಜೆ ನಡೆಸುವರು. 
     ತಾ. 27ರ ಪೂರ್ವಾಹ್ನ 11ಕ್ಕೆ ನಗರದ ಹೊರವಲಯದಲ್ಲಿರುವ ಹಂಗಳೂರು ಶ್ರೀ ಅನಂತಪದ್ಮನಾಭ ಸಭಾಭವನದಲ್ಲಿ ನಡೆಯಲಿರುವ ಶತಚಂಡೀಮಹಾಯಾಗದ ಪೂರ್ಣಾಹುತಿ, ತಾ. 28ರ ಪೂರ್ವಾಹ್ನ 8ಕ್ಕೆ ಕುಂದಾಪುರದ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಬ್ರಹ್ಮಕುಂಭಾಭಿಷೇಕ, ಶ್ರೀಮಹಾಕಾಳೀ ದೇವಸ್ಥಾನಕ್ಕೆ ಸಂದರ್ಶನ-ಇತ್ಯಾದಿಗಳಲ್ಲಿ ಭಾಗವಹಿಸಿ, ಅನುಗ್ರಹ ಪ್ರವಚನ ನೀಡುವರು. 
    ತಾ. 28ರ ಸಂಜೆ 3.30ಕ್ಕೆ ಕುಂದಾಪುರದಿಂದ ಹೊರಟು ಗೋವಾದವರೆಗಿನ ತಮ್ಮ ಧರ್ಮಯಾತ್ರೆಯನ್ನು ಮುಂದುವರಿಸಲಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com