ಕರ್ಣಾಟಕ ಬ್ಯಾಂಕ್ ಮ್ಯಾನೇಜರ್‌ಗೆ ಬೀಳ್ಕೊಡುಗೆ

ತ್ರಾಸಿ: ಇಲ್ಲಿನ ಅಂಬೇಡ್ಕರ್ ಭವನದಲ್ಲಿ ತ್ರಾಸಿ ಗ್ರಾಮಸ್ಥರು ಹಮ್ಮಿಕೊಂಡ ಅಭಿನಂದನೆ ಹಾಗೂ ಸನ್ಮಾನ ಸಮಾರಂಭದಲ್ಲಿ ಕರ್ಣಾಟಕ ಬ್ಯಾಂಕಿನ ತ್ರಾಸಿ ಶಾಖೆಯ ನಿವೃತ್ತ ಮ್ಯಾನೇಜರ್ ಬಿ. ವಿಷ್ಣುಮೂರ್ತಿ ಭಟ್ ದಂಪತಿಗಳನ್ನು  ಗೌರವಿಸಲಾಯಿತು.

ತ್ರಾಸಿ ಇಗರ್ಜಿಯ ಧರ್ಮಗುರು ರೆ.ಫಾ. ಅನಿಲ್ ಕರ್ನಾಲಿಯೋ ಮಾತನಾಡಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವುದಕ್ಕೆ ಬ್ಯಾಂಕಿನ ಕಾನೂನುಗಳ ಜೊತೆಗೆ ಮನುಷ್ಯತ್ವ ಮುಖ್ಯ ಎನ್ನುವುದಕ್ಕೆ ಬಿ. ವಿಷ್ಣುಮೂರ್ತಿ ಸಾಕ್ಷಿ. ಕೇವಲ ಕರ್ತವ್ಯ ಮಾತ್ರವಲ್ಲದೇ ಗ್ರಾಹಕರ ಜೊತೆಗೆ ಉತ್ತಮ ಸಂಭಧ ಹೊಂದುವ ಮೂಲಕ ತ್ರಾಸಿಯಲ್ಲಿ ಕರ್ಣಾಟಕ ಬ್ಯಾಂಕ್‌ನ ವ್ಯವಹಾರವನ್ನು ಮೇಲ್ದರ್ಜೆಗೇರಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಮೂವತ್ತನಾಲ್ಕು ವರ್ಷಗಳ ಕಾಲ ಕರ್ಣಾಟಕ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಿ. ವಿಷ್ಣುಮೂರ್ತಿ ಭಟ್ ಹಾಗೂ ಅವರ ಪತ್ನಿ ಗಾಯತ್ರಿ ಭಟ್ ಅವರನ್ನು ಗೌರವಿಸಲಾಯಿತು.

ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯಿತಿ ಮಾಜೀ ಉಪಾಧ್ಯಕ್ಷ ರಾಜು ದೇವಾಡಿಗ ವಹಿಸಿದ್ದರು. ಕುಂದಾಪುರದ ಕರ್ಣಾಟಕ ಬ್ಯಾಂಕ್ ಶಾಖಾ ಪ್ರಬಂಧಕ ಗೋಪಾಲಕೃಷ್ಣ, ತ್ರಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಿತಾ ನಾಯಕ್, ತ್ರಾಸಿ ಲಯನ್ ಅಧ್ಯಕ್ಷ ಜಾರ್ಜ್ ಡಿ ಅಲ್ಮೇಡಾ, ಉದ್ಯಮಿ ಉಮೇಶ್ ಮೇಸ್ತ, ಪಿಡಿಒ ಶೋಭಾ, ತ್ರಾಸಿ ಕರ್ಣಾಟಕ ಬ್ಯಾಂಕಿನ ನಿಯುಕ್ತ ಶಾಖಾ ಪ್ರಬಂಧಕ ಗೌತಮ್ ಶೆಟ್ಟಿ, ಶ್ರೀ ಕಾಳಿಕಾಂಬಾ ದೇವಸ್ಥಾನ ಉಪ್ರಳ್ಳಿ ಇದರ ಆಡಳಿತ ಮೊಕ್ತೇಸರ ಸುಧಾಕರ ಆಚಾರ್ಯ ಉಪಸ್ಥಿತರಿದ್ದರು.

ಸುಜಾತಾ ಎಂ. ಸಾಲ್ಯಾನ್ ಪ್ರಾರ್ಥಿಸಿದರು. ಉಪೇಂದ್ರ ಶೇರೆಗಾರ್ ಪ್ರಮಾಣಪತ್ರ ವಾಚಿಸಿದರು. ಲಯನ್ ಸದಾನಂದ ಶೇಟ್ ಸ್ವಾಗತಿಸಿದರು. ಜೋಸೆಫ್ ಡಿಸೋಜಾ ವಂದಿಸಿದರು. ಸರ್ಕಾರೀ ಪ್ರೌಢಶಾಲೆಯ ದೈಹಿಕ ಶಿಕ್ಷಕ ಚಂದ್ರಶೇಖರ್ ಶೆಟ್ಟಿ ನಿರೂಪಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com