ತಾಳಿ ಕಟ್ಟುವ ವೇಳೆ ಪ್ರೀತಿಸಿದ ಹುಡುಗನ ನಿರಾಕರಣೆ

ತುಮಕೂರು: ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರದಲ್ಲಿ ಮದುವೆಗೆ ಒಲ್ಲೆ ಎಂದು ನಿರಾಕರಿಸಿದ ವಧು ಕಲ್ಯಾಣ ಮಂಟಪದಿಂದ ಹೊರ ನಡೆದಿದ್ದಾಳೆ. ಇದರಿಂದ 8 ವರ್ಷದ ಪ್ರೇಮಕ್ಕೆ ಪೂರ್ಣವಿರಾಮ ಬಿದ್ದಂತಾಗಿದೆ.
ಇಂಥ ಪ್ರಸಂಗ ತುಮಕೂರಿನ ಬೀರಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಹೆಬ್ಬೂರಿನ ಸೋಮಶೇಖರ್ಗೂ ಮತ್ತು ಊರುಕೆರೆಯ ಶಿಲ್ಪಾ ಎಂಬುವರಿಗೂ ನಡೆಯಬೇಕಿದ್ದ ಮದುವೆ ಮುರಿದು ಬಿದ್ದಿದೆ. ಮುಹೂರ್ತ ಪ್ರಕ್ರಿಯೆಯ ಆರಂಭದಿಂದ ದುಃಖದಲ್ಲಿಯೇ ಇದ್ದ ಶಿಲ್ಪಾ ತಾಳಿ ಕಟ್ಟುವ ವೇಳೆಗೆ ನಿರಾಕರಿಸಿ ಕಣ್ಣೀರಿಡುತ್ತಾ ಕುಸಿದು ಬಿದ್ದಳು. ಇದರಿಂದ ತಮಗೆ ಅವಮಾನವಾಗಿದೆ ಕ್ರಮ ಕೈಗೊಳ್ಳಬೇಕೆಂದು ವರನ ಕಡೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.
ಹೆಬ್ಬೂರಿನ ಸೋಮಶೇಖರ್ ಮತ್ತು ಊರುಕೆರೆಯ ಶಿಲ್ಪಾ ದೂರದ ಸಂಬಂಧಿಗಳಾಗಿದ್ದು ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದರು. ಒಂದು ವರ್ಷದ ಹಿಂದೆ ಈ ಎರಡು ಕುಟುಂಬಗಳು ಇವರಿಬ್ಬರ ನಡುವೆ ಮದುವೆಗೆ ನಿರ್ಧರಿಸಿ ನಿಶ್ಚಿತಾರ್ಥ ನೆರವೇರಿಸಿದ್ದರು. ಆ ಬಳಿಕ ಶಿಲ್ಪ ಸೋಮಶೇಖರ್ನಿಂದ ದೂರವಿರಲು ಬಯಸುತ್ತಿದ್ದಳು ಎನ್ನಲಾಗಿದೆ. ಸುಮಾರು 10 ತಿಂಗಳ ಹಿಂದೆ ಕುಟುಂಬ ಸಮೇತರಾಗಿ ತಿರುಪತಿಗೆ ಹೋಗುವಾಗ ಸೋಮಶೇಖರ್ ಅಸಭ್ಯವಾಗಿ ವರ್ತಿಸಿದ್ದ ಎಂಬುದು ಶಿಲ್ಪಾಳ ಆರೋಪ. ಆದರೆ ಆಕೆಯ ಪೋಷಕರು ಮದುವೆಯಾದರೆ ಸರಿ ಹೋಗುತ್ತೆ ಎಂಬ ಭಾವನೆಯಿಂದ ಮನವೊಲಿಸಿ ವಿವಾಹಕ್ಕೆ ಮುಂದಾದರು. ಈ ಪ್ರಕಾರ ಭಾನುವಾರ ಮದುವೆ ನಡೆಯುವುದಿತ್ತು. ಶನಿವಾರ ರಾತ್ರಿಯಿಂದಲೂ ಶಿಲ್ಪಾ ಅನ್ಯ ಮನಸ್ಕಳಾಗಿಯೇ ಉಳಿದು ಭಾನುವಾರ ಬೆಳಗ್ಗೆ ತಾಳಿ ಕಟ್ಟಿಸಿಕೊಳ್ಳುವಾಗ ನಿರಾಕರಿಸಿದ್ದಾಳೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com