ಸ್ವಯಂ ಉದ್ಯೋಗ ಯೋಜನೆಗೆ ಅರ್ಜಿ ಆಹ್ವಾನ

ಉಡುಪಿ: ಕರ್ನಾಟಕ ಸ್ವಯಂ ಉದ್ಯೋಗ ಯೋಜನೆ (ಕೆ.ಎಸ್‌.ಇ.ಎಸ್‌) ಸ್ವ ಉದ್ಯೋಗ ಸ್ಥಾಪಿಸಲು ಆಸಕ್ತಿ ಇರುವ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ/ಯುವತಿಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಗರಿಷ್ಠ ಯೋಜನಾ ವೆಚ್ಚ 10 ಲ. ರೂ. ಮಾತ್ರ. ಬ್ಯಾಂಕ್‌ ಸಾಲದೊಂದಿಗೆ ಹೊಸ ಘಟಕ ಸ್ಥಾಪಿಸುವವರಿಗೆ ಯೋಜನಾ ವೆಚ್ಚದ ಶೇ. 25ರಿಂದ 35ರ ವರೆಗೆ ಸಹಾಯಧನ ನೀಡಲಾಗುವುದು.

ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು ಅಥವಾ ಗುರುತಿಸಿದ ಶಿಕ್ಷಣ ಸಂಸ್ಥೆಗಳಿಂದ ವೃತ್ತಿಪರ ತರಬೇತಿ, ಐಟಿಐ, ಡಿಪ್ಲೊಮಾ ಪದವಿ ಹೊಂದಿರಬೇಕು. 21 ವರ್ಷ ಮೇಲ್ಪಟ್ಟು, ಗರಿಷ್ಠ 35 ವರ್ಷ ಸಾಮಾನ್ಯ ವರ್ಗದವರಿಗೆ, ಗರಿಷ್ಠ 45 ವರ್ಷ ವಿಶೇಷ ವರ್ಗದ (ವಿಶೇಷ ವರ್ಗ: ಮಹಿಳೆ/ ಪರಿಶಿಷ್ಟ ಜಾತಿ- ಪಂಗಡ/ ಹಿಂದುಳಿದ ವರ್ಗ/ ಅಲ್ಪಸಂಖ್ಯಾಕರು/ ಮಾಜಿ ಯೋಧರು/ ಅಂಗವಿಕಲರು.) ನಿರುದ್ಯೋಗಿ ಯುವಕ/ ಯುವತಿಯರು ನಿಗದಿತ ನಮೂನೆಯಲ್ಲಿ ಜಂಟಿ ನಿರ್ದೇಶಕರು, ಕೈಗಾರಿಕಾ ಇಲಾಖೆಯ, 36-ಸಿ, ಶಿವಳ್ಳಿ, ಕೈಗಾರಿಕಾ ಪ್ರದೇಶ, ಮಣಿಪಾಲ-576104, ದೂ: 0820-2575650 ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.

ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವುದೇ ಯೋಜನೆಯಲ್ಲಿ ಸಹಾಯಧನ ಪಡೆಯಲು ಅವಕಾಶವಿರುವುದಿಲ್ಲ. ಆದಾಯ ಮಿತಿ ಇರುವುದಿಲ್ಲ. ನಿಯಾಮಾನುಸಾರ ವಿಶೇಷ ವರ್ಗದ ಅರ್ಜಿದಾರರಿಗೆ, ಕೈಗಾರಿಕೆ ಉತ್ಪಾದನೆ ಚಟುವಟಿಕೆಗೆ ಆದ್ಯತೆ ನೀಡಲಾಗುವುದು. ಸೇವಾ ಚಟುವಟಿಕೆಗೆ ಅವಕಾಶವಿದ್ದು, ವ್ಯಾಪಾರ ವ್ಯವಹಾರ ಘಟಕ ಸ್ಥಾಪಿಸಲು ಅವಕಾಶವಿರುವುದಿಲ್ಲ. ಒಂದು ವಾರದ ಉದ್ಯಮಶೀಲತಾ ತರಬೇತಿ ಪಡೆದಿದ್ದಲ್ಲಿ ವಿನಾಯಿತಿ ಇದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನ. 10 ಆಗಿದೆ ಎಂದು ಜಂಟಿ ನಿರ್ದೇಶಕರು ತಿಳಿಸಿರುತ್ತಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com