ನ. 16: ಸಂಗೀತ ಭಾರತಿಯಿಂದ ಸ್ವರಾಂಜಲಿ

ಮಂಗಳೂರು : ಸಂಗೀತ ಭಾರತಿ ಪ್ರತಿಷ್ಠಾನದ ವತಿಯಿಂದ ಸ್ವರಾಂಜಲಿ ಕಾರ್ಯಕ್ರಮ ನ. 16ರಂದು ಸಂಜೆ 6ರಿಂದ ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ನಡೆಯಲಿದೆ. ಪಂ| ವಸಂತ್‌ ಕನಕಾಪುರ ಮತ್ತು ವಿದ್ವಾನ್‌ ಯು. ಶ್ರೀನಿವಾಸ್‌ ಅವರ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಲಾಗಿದೆ.

ಪ್ರಥಮವಾಗಿ ಕುಂದಾಪುರದ ಅವಿನಾಶ್‌ ಹೆಬ್ಟಾರ್‌ ಅವರಿಂದ ಸಿತಾರ್‌ ವಾದನ ನಡೆಯಲಿದೆ. ತಬ್ಲಾದಲ್ಲಿ ಹೊನ್ನಾವರದ ಗೋಪಾಲಕೃಷ್ಣ ಹೆಗ್ಡೆ ಸಹಕರಿಸಲಿದ್ದಾರೆ. ಬಳಿಕ ಕಾರ್ಕಳದ ಮಹಾಲಕ್ಷ್ಮಿ ಶೆಣೈ ಅವರಿಂದ ಹಿಂದೂಸ್ಥಾನೀ ಹಾಡುಗಾರಿಕೆ ನಡೆಯಲಿದ್ದು, ಹಾರ್ಮೋನಿಯಂನಲ್ಲಿ ಮಂಗಳೂರಿನ ನರೇಂದ್ರ ಎಲ್‌. ನಾಯಕ್‌ ಹಾಗೂ ತಬ್ಲಾದಲ್ಲಿ ಬೆಂಗಳೂರಿನ ಕೇಶವ್‌ ಜೋಶಿ ಸಹಕರಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶಾವಕಾಶ ಕಲ್ಪಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಉಸ್ತಾದ್‌ ರಫೀಕ್‌ ಖಾನ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com