ವೈದ್ಯಾಧಿಕಾರಿಯ ಅಚಾತುರ್ಯ. ರೇಪ್ ಎಂಬ ಸುದ್ದಿ ಹಬ್ಬಿಸಿದರು.

ಬೈಂದೂರು : ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯ ಅಚಾತುರ್ಯದಿಂದಾಗಿ ಚಿಕಿತ್ಸೆಗೆ ಬಂದ ಬಾಲಕಿಗೆ ಅತ್ಯಾಚಾರ ಮಾಡಲಾಗಿದೆ ಎಂಬ ಸುದ್ದಿ ನಾಗರೀಕ ಸಮುದಾಯವನ್ನು ಬೆಚ್ಚಿ ಬಿಳುವಂತೆ ಮಾಡಿತು.
ಘಟನೆಯ ವಿವರ: ಬೈಂದೂರಿನ ಆಶ್ರಮ ಶಾಲೆಯ ಮೂರನೇ ತರಗತಿಯಲ್ಲಿ ಕಲಿಯುತ್ತಿರುವ ಹುಬ್ಬಳ್ಳಿ ಮೂಲದ ವಿದ್ಯಾರ್ಥಿನಿ ಮೂತ್ರ ವಿಸರ್ಜಿಸುವಾಗ ಕೊಂಚ ರಕ್ತದ ಅಂಶ ಗೋಚರಿಸಿ ಅಸ್ವಸ್ಥಳಾಗಿದ್ದರಿಂದ ವಾರ್ಡನ್ ಹಾಗೂ ಸಹಾಯಕಿಯರು ಬೈಂದೂರಿನ ಸರಕಾರಿ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯಾಧಿಕಾರಿ ಮೇಲ್ನೋಟಕ್ಕೆ ಬಾಲಕಿಯನ್ನು ಪರೀಕ್ಷಿಸಿ, ಕೂಡಲೇ ಅಂಬುಲೆನ್ಸ್ ಮೂಲಕ ಕುಂದಾಪುರಕ್ಕೆ ಕರೆದೊಯ್ಯಬೇಕೆಂದು ಸೂಚಿಸಿದರು. ವೈದ್ಯರು ವಸ್ತುಸ್ಥಿತಿಯನ್ನು ತಿಳಿಯುವ ಗೋಜಿಗೂ ಹೋಗದೆ ಇದ್ದುದು ಈ ಅಚಾತುರ್ಯಕ್ಕೆ ಎಡೆಮಾಡಿಕೊಟ್ಟಿತಲ್ಲದೇ ಕೆಲವು ಸುದ್ದಿಮಾಧ್ಯಮಗಳಲ್ಲಿ ಅತ್ಯಾಚಾರದ ಶಂಕೆ ಎಂಬ ಸುದ್ದಿ ಪ್ರಸಾರವಾಗತೊಡಗಿತ್ತು.
     ವಾಸ್ತವವಾಗಿ ಬಾಲಕಿಯ ಮೂತ್ರ ವಿಸರ್ಜನೆಯ ಸ್ಥಳದಲ್ಲಿ ಸಣ್ಣ ಗುಳ್ಳೆಯೊಂದು ಎದ್ದಿದ್ದು ಅದನ್ನು ಯಾರಲ್ಲೂ ಹೇಳದ  ಬಾಲಕಿ ಸೆಫ್ಟಿಕ್ ಪಿನ್ ನಿಂದ ಅದನ್ನು ಒಡೆದು ಕೊಂಡದ್ದರಿಂದ ಅಲ್ಲಿ ರಕ್ತಸ್ರಾವವಾಗಿ ಅಲರ್ಜಿ ಉಂಟಾಗಿತ್ತು. ಬಳಿಕ ಕುಂದಾಪುರದ ವೈದ್ಯಾಧಿಕಾರಿಗಳು ನಿಜ ಘಟನೆಯನ್ನು ಧೃಡಪಡಿಸಿದ ಮೇಲೆ ಎಲ್ಲರೂ ನಿಟ್ಟುಸಿರುಬಿಡುವಂತಾಯಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com