ಯುವತಿ ನಿಗೂಢ ಸಾವು: ಮಹಿಳಾ ಆಯೋಗ ಭೇಟಿ

ಸಾಲಿಗ್ರಾಮ: ಇಲ್ಲಿನ ನೆಲ್ಲಿಬೆಟ್ಟುವಿನಲ್ಲಿ ಮನೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಜಾರ್ಖಂಡ್ ಮೂಲದ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ  ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಭಂಡಾರಿ ಹುಡುಗಿ  ಕೆಲಸ ಮಾಡಿಕೊಂಡಿದ್ದ ಯಡಬೆಟ್ಟು ಗೋಪಾಲಕಷ್ಣ ರಸ್ತೆಯಲ್ಲಿರುವ ಜಾರ್ಜ್ ಅವರ ಮನೆಗೆ ತೆರಳಿ ಮಾತನಾಡಿ ಘಟನೆಯ ಬಗ್ಗೆ ಮಾಹಿತಿ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಪ್ರಕರಣದ ವಿಚಾರವಾಗಿ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಗೊಂದಲಗಳಿದ್ದು, ಶೀಘ್ರದಲ್ಲಿ ಸತ್ಯಾಸತ್ಯತೆ ಬಯಲಿಗೆಳೆಯಬೇಕಾಗಿದೆ ಎಂದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗ್ರೇಸಿ ಗೊನ್ಸಾಲ್ವಿಸ್, ಮಂದಾರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಕೆ.ಪಿ ಶೇಖರ್, ಉಡುಪಿ ಜಿಲ್ಲಾ ಗಾಣಿಗ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ದಿನೇಶ್ ಗಾಣಿಗ, ಜಯ ಕರ್ನಾಟಕ ಸಾಲಿಗ್ರಾಮ ಘಟಕದ ನಾಗರಾಜ ಗಾಣಿಗ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯರಾದ ಅಚ್ಯುತ ಪೂಜಾರಿ, ಶಿವ ಪೂಜಾರಿ, ಸ್ಥಳೀಯರಾದ ಪ್ರಭಾಕರ ಆಚಾರ್ಯ, ಉದಯ ಪೂಜಾರಿ ಮತ್ತು ಕೃಷ್ಣ ಪೂಜಾರಿ ಮೊದಲಾದವರು ಈ ಸಂದರ್ಭ ಹಾಜರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com