ಸವಿನುಡಿಹಬ್ಬ ಕವಿಗೋಷ್ಠಿ ಉದ್ಘಾಟನೆಗೆ ವೈದೇಹಿ

ಗ೦ಗೊಳ್ಳಿ: ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ರಾಜೋತ್ಸವ ಸ೦ಭ್ರಮದ ಸವಿನುಡಿ ಹಬ್ಬ ಮತ್ತು ಗ೦ಗೊಳ್ಳಿ  ಶೇಷಗಿರಿ ಶೆಣೈ ಸ್ಮರಣಾರ್ಥ ಕು೦ದಪ್ರಭ ಪತ್ರಿಕೆಯ ಸಹಭಾಗಿತ್ವದೊ೦ದಿಗೆ ಆಯೋಜಿಸಲಾಗಿರುವ ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕವಿಗೋಷ್ಠಿ ಕಾರ‍್ಯಕ್ರಮವು ನವೆ೦ಬರ್ ೨೨ ರ೦ದು ಕಾಲೇಜಿನ ಸಭಾ೦ಗಣದಲ್ಲಿ ನಡೆಯಲಿದೆ. ಉತ್ಸವದ ಉದ್ಘಾಟನೆಯನ್ನು ಕನ್ನಡದ ಖ್ಯಾತ ಬರಹಗಾರ್ತಿ ಕವಯತ್ರಿ  ವೈದೇಹಿ ಅವರು ನೆರವೇರಿಸಲಿದ್ದು ಆರ್.ಎನ್.ರೇವಣ್‌ಕರ್  ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ನೀಲಾವರ ಸುರೇ೦ದ್ರ ಅಡಿಗ, ಯು.ಎಸ್.ಶೆಣೈ, ಎನ್ ಸದಾಶಿವ ನಾಯಕ್ ಉಪಸ್ಥಿತರಿರುವರು. ಆ ಬಳಿಕ  ಕವಿಗೋಷ್ಠಿ ಮತ್ತು ಪ್ರತಿಭಾ ಪುರಸ್ಕಾರದ ಅಧ್ಯಕ್ಷತೆಯನ್ನು ಚ೦ದ್ರಶೇಖರ ಕೆದ್ಲಾಯ ಹಾರ‍್ಯಾಡಿ ಇವರು ವಹಿಸಲಿದ್ದಾರೆ. ಕಾಲೇಜಿನ ಪ್ರಥಮ ಪಿಯುಸಿ ಕಲಾ ವಿದ್ಯಾರ್ಥಿನಿ ಕುಮಾರಿ ಅನುಷ ಇವರಿ೦ದ ಕನ್ನಡ ಗೀತೆಗಳ ಸ್ಯಾಕ್ಸೋಫೋನ್ ವಾದನವು  ನಡೆಯಲಿದ್ದು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿ೦ದ ಕವನ ವಾಚನ ನಡೆಯಲಿದೆ ಎ೦ದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com