ಡಾ| ಕಸ್ತೂರಿ ರಂಗನ್‌ ವರದಿಯ ಜಾರಿ ವಿರೂಧಿಸಿ ಬಂದ್

ಅಮಾಸೆಬೈಲು: ಅಧಿಕಾರಿಗಳು ಯಾವುದೇ ವರದಿ ಜಾರಿಯಾಗಿಸುವ ಮೊದಲು ಜನಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು. ಆದರೆ ಡಾ| ಕಸ್ತೂರಿ ರಂಗನ್‌ ವರದಿಯ ಜಾರಿ ಬಗ್ಗೆ ಸಮಿತಿಗಳು ಜನಪ್ರತಿನಿಧಿಗಳಿಗೆ ಮಾಹಿತಿ ನೀಡುತ್ತಿಲ್ಲ ಹಾಗೂ ಮಾತು ಕೂಡ ಕೇಳುತ್ತಿಲ್ಲ. ಇದರ ವಿರೂಧ ಹೋರಾಡಬೇಕಾದರೆ, ಜನರೇ ಪ್ರತಿಭಟನೆ ಮಾಡುವ ಮೂಲಕ ಜನಪ್ರತಿನಿಧಿಗಳಿಗೆ ಶಕ್ತಿ ತುಂಬಬೇಕು ಎಂದು ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಹೇಳಿದರು

ಪಶ್ವಿ‌ಮಘಟ್ಟ ವ್ಯಾಪ್ತಿಯಲ್ಲಿ ಉದ್ದೇಶಿತ ಡಾ| ಕಸ್ತೂರಿ ರಂಗನ್‌ ವರದಿಯ ಜಾರಿ ವಿರೂಧಿಸಿ ಅಮಾಸೆಬೈಲು ಗ್ರಾ. ಪಂ. ವ್ಯಾಪ್ತಿಯ ಅಮಾಸೆಬೈಲು, ಜಡ್ಡಿನಗದ್ದೆ, ತೊಂಬಟ್ಟು, ಮಚ್ಚಟ್ಟು ಗ್ರಾಮಗಳ ನೂರಾರು ಜನರ ಪ್ರತಿಭಟನೆಯ ಸಭೆಯನ್ನುದ್ದೇಸಿ ಮಾತನಾಡಿದರು.

ಸರಕಾರವು ಸಿಎನ್‌ಡಿ, ಸಿಆರ್‌ಜಡ್‌, ಡಿಂಮಡ್‌ ಪಾರೆಸ್ಟ್‌, ರಿರ್ಜವು ಪಾರೆಸ್ಟ್‌ ಮತ್ತು ಮುಂತಾದ ಹೆಸರಿನಲ್ಲಿ ಜನರಿಗೆ ಹಾಗೂ ರೈತರನ್ನು ವಂಚಿಸುತ್ತಿದೆ. ಇತಂಹದರ ವಿರೂಧ ಪಕ್ಷಬೇದ ಮರೆತು ಜನಪ್ರತಿನಿಧಿಗಳು ಹೋರಾಟ ಮಾಡಬೇಕು. ಡಾ| ಕಸ್ತೂರಿ ರಂಗನ್‌ ವರದಿಯ ಜಾರಿ ಹಾಗೂ ವರದಿಯ 10ಕಿ.ಮೀ. ವ್ಯಾಪ್ತಿಯ ಸೂಕ್ಷ್ಮ ಸಂವೇದಿ ಪ್ರದೇಶ ಜಾರಿಯ ಬಗ್ಗೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟಗಳು ನಡೆಯಲಿವೆ ಎಂದರು.

ಡಾ| ಕಸ್ತೂರಿ ರಂಗನ್‌ ವರದಿಯ ಜಾರಿಯ ಅಧಿಸೂಚನೆಯನ್ನು 2014ನೇ ಜೂನ್‌9ರಂದು ಸರಕಾರವು ವಾಪಾಸು ಪಡೆದಿದೆ. ಆದರೆ ಇರುವುದು ಸರಕಾರದ ಮುಂದೆ ವರದಿಯ ವಿಮರ್ಶೆಗಳು ಮಾತ್ರ. ಈ ವಿಮರ್ಶೆಯ ಬಗ್ಗೆ ಸಚಿವ ಸಂಪುಟವು, ಒಂದು ಉಪ ಸಮಿತಿಯನ್ನು ರಚನೆ ಮಾಡಿದೆ. ಈ ಸಮಿತಿಗೆ ಅರಣ್ಯ ಸಚಿವರು  ಅಧ್ಯಕ್ಷರಾಗಿರುತ್ತಾರೆ. ಅದರ ಬಗ್ಗೆ ಸಂಬಂಧ ಪಟ್ಟ ಗ್ರಾಮಗಳಲ್ಲಿ ಗ್ರಾಮ ಸಭೆಯನ್ನು ನಡೆಸುವ ಮೂಲಕ ಸಮಿಕ್ಷೆಗಳು ನಡೆಯಲಿವೆ ಎಂದು ಮಾಜಿ ಸಂಸದ ಕೆ, ಜಯಪ್ರಕಾಶ ಹೆಗ್ಡೆ ಅವರು ಹೇಳಿದರು.

ಅಮಾಸೆಬೈಲು ಗ್ರಾ. ಪಂ. ಅಧ್ಯಕ್ಷ ಶಂಕರ ಶೆಟ್ಟಿ ಜವಳಿ ಅವರು ಉದ್ದೇಶಿತ ಡಾ| ಕಸ್ತೂರಿ ರಂಗನ್‌ ವರದಿಯ ಜಾರಿ ವಿರೂಧಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು.

ಜಿ. ಪಂ. ಸದಸ್ಯ ರಶ್ವತ್‌ ಕುಮಾರ ಶೆಟ್ಟಿ, ತಾ. ಪಂ. ಸದಸ್ಯರ ಆರ್‌. ನವೀನಚಂದ್ರ ಶೆಟ್ಟಿ, ನೋಡಲ್‌ ಅಧಿಕಾರಿ ಸೀತಾರಾಮ ಶೆಟ್ಟಿ, ಗ್ರಾ. ಪಂ. ಉಪಾಧ್ಯಕ್ಷ ಶೇಖರ ಪೂಜಾರಿ, ಸದಸ್ಯರಾದ ಎಂ. ಅಶೋಕ್‌ ಕುಮಾರ ಆಚಾರ್ಯ, ಕೃಷ್ಣ ಪೂಜಾರಿ, ರಾಮಣ್ಣ ಶೆಟ್ಟಿ, ರಾಮಣ್ಣ ಹೆಗ್ಡೆ ರಟ್ಟಾಡಿ, ತಿಮ್ಮಪ್ಪ ಹೆಬ್ಟಾರ್‌, ಸುಲೋಜನ ಪೂಜಾರಿ, ಮನೋರಾಮ ಶೆಟ್ಟಿ ಮತ್ತು ಮುಂತಾದವರು ಉಪಸ್ಥಿತರಿದರು.

ಅಮಾಸೆಬೈಲು ಗ್ರಾ. ಪಂ. ವ್ಯಾಪ್ತಿಯ ಅಮಾಸೆಬೈಲು, ಜಡ್ಡಿನಗದ್ದೆ, ತೊಂಬಟ್ಟು, ಮಚ್ಚಟ್ಟು ಗ್ರಾಮಗಳಿಂದ ಸಾವಿರಾರೂ ಸಂಖ್ಯೆಲ್ಲಿ ಜನರು ನೂರಾರು ವಾಹನಗಳ ಮೂಲಕ ಪ್ರತಿಭಟನೆಯ ರ್ಯಾಲಿ ನಡೆಸಿ, ಅಮಾಸೆಬೈಲು ಪೇಟೆಯನ್ನು ಬಂದ್‌ ಮಾಡಿ, ಪ್ರತಿಭಟನೆಯ ಸಭೆಯಲ್ಲಿ ಭಾಗವಹಿಸಿದರು.

ಸತ್ಯನಾರಾಯಣ ರಾವ್‌ ರಟ್ಟಾಡಿ ಕಾರ್ಯಕ್ರಮ ನಿರೂಪಿಸಿದರು. ಅಭಿವೃದ್ಧಿ ಅಧಿಕಾರಿ ಪ್ರಸ್ಥವಿಕವಾಗಿ ಮಾತನಾಡಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com