ಕನ್ನಡದ ಚಲುವೆಗೆ ವಿಶ್ವ ಸೌಂದರ್ಯ ಕಿರೀಟ

 ಪೋಲೆಂಡ್‌ನ‌ಲ್ಲಿ ನಡೆದ "ಸುಪ್ರಾ ಇಂಟರ್‌ ನ್ಯಾಷನಲ್‌ ಸೌಂದರ್ಯ ಸ್ಪರ್ಧೆ'ಯಲ್ಲಿ ಶಿವಮೊಗ್ಗದ ಭದ್ರಾವತಿಯ ಆಶಾ ಭಟ್‌  "ಮಿಸ್‌ ಸೂಪರ್‌ ನ್ಯಾಷನಲ್‌-2014'ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 

ಕಳೆದ ತಿಂಗಳು ಮುಂಬೈನಲ್ಲಿ ನಡೆದಿದ್ದ "ಮಿಸ್‌ ಡಿವಾಯೂನಿವರ್ಸ್‌'ನಲ್ಲಿ ದ್ವಿತೀಯ ರನ್ನರ್‌ಅಪ್‌ ಪ್ರಶಸ್ತಿ ಪಡೆದು ಫ್ಯಾಷನ್‌ ಜಗತ್ತಿನ ಗಮನ ಸೆಳೆದಿದ್ದ ಆಶಾ ಭಟ್‌, ಇದೀಗ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾಳೆ.

ಅಂತಾರಾಷ್ಟ್ರೀಯ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ  ನಿರ್ಣಾಯಕರು  'ಈ ಅವಾರ್ಡ್‌ ನಿಮಗೇಕೆ ಬೇಕು?'  ಎಂಬ ಪ್ರಶ್ನೆ ಕೇಳಿದಾಗ ಅದಕ್ಕೆ ಪ್ರತಿಕ್ರಿಯಿಸಿದ ಆಶಾ,"ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರಲು ಒಂದು ವೇದಿಕೆ ಬೇಕು. ಈ ಸೌಂದರ್ಯ ಪ್ರಶಸ್ತಿ ದೇಶಕ್ಕಾಗಿ ಸೇವೆ ಸಲ್ಲಿಸುವ ಅವಕಾಶವಾಗಿ ಬದಲಾಗಬೇಕು. ಹೀಗಾದರೆ ನನಗೆ ಈ ಅವಾರ್ಡ್‌ ಬೇಕು' ಎಂದು ಪ್ರಶಸ್ತಿ ಮುಡಿಗೇರಿಸಿಕೊಂಡರು. 

ಬೆಂಗಳೂರಿನ ಆರ್‌.ವಿ.ಕಾಲೇಜಿನಲ್ಲಿ ಫೈನಲ್‌ ಎಂಜಿನಿಯರಿಂಗ್‌ ಓದುತ್ತಿರುವ ಆಶಾ ಭಟ್ ಭದ್ರಾವತಿಯ ಭದ್ರಾವತಿಯ ಸುಬ್ರಹ್ಮಣ್ಯ ಮತ್ತುಶ್ಯಾಮಲಾ ಭಟ್‌ ಅವರ ದ್ವಿತೀಯ ಪುತ್ರಿ. ಭದ್ರಾವತಿಯಲ್ಲಿ ಎಸ್‌ಎಸ್‌ಎಲ್‌ಸಿಯವರೆಗೆ ಓದಿ ನಂತರ ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಮುಂದುವರಿಸಿದರು. ಆಗಲೇ ಅವರಿಗೆ ಮಾಡೆಲ್‌ ಕ್ಷೇತ್ರದ ಮೇಲೆ ಆಸಕ್ತಿ ಬೆಳೆದು ಸ್ವಂತ ಅಧ್ಯಯನದ ಮೂಲಕ ಆರೇ ತಿಂಗಳಲ್ಲಿ ವಾಕಿಂಗ್‌ ಸ್ಟೈಲ್‌, ಡ್ರೆಸ್‌ ಸೇರಿದಂತೆ ವಿವಿಧ ರೀತಿಯ ಕಲಿಕೆಯಲ್ಲಿ ತರಬೇತಿ ಪಡೆದುಕೊಂಡು ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕತೊಡಗಿದರು

ಚಿಕ್ಕಂದಿನಿಂದಲೇ ಭರತನಾಟ್ಯ, ಕರ್ನಾಟಕ ಸಂಗೀತ, ವೀಣೆ, ಚಿತ್ರಕಲೆ, ವಿವಿಧ ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಆಶಾ ಎನ್‌ಸಿಸಿಯಲ್ಲಿ ರಾಷ್ಟ್ರಪತಿಗಳ ಚಿನ್ನದ ಪದಕ ಪಡೆದು, ಟಾಪ್‌ 10 ಕೆಡೆಟ್‌ಗಳ ಲೀಡರ್‌ ಆಗಿದ್ದರು. ಕೆಡೆಟ್‌ ಅಂಬಾಸಡರ್‌ ಆಗಿ, ಸಾರ್ಕ್‌ ದೇಶದಲ್ಲಿ ಬೆಸ್ಟ್‌ ಕೆಡೆಟ್‌ ಅಂಬಾಸೆಡರ್‌ ಪ್ರಶಸ್ತಿ ಪಡೆದಳು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com