ಫೇಸ್‌ಬುಕ್‌ ನಿಂದ ಐಐಟಿ ವಿದ್ಯಾರ್ಥಿನಿಗೆ 2 ಕೋಟಿ ರೂ. ಆಫ‌ರ್‌

ಜೈಪುರ: ಇತ್ತೀಚೆಗೆ ಐಐಟಿ ವಿದ್ಯಾರ್ಥಿನಿಯೊಬ್ಬಳಿಗೆ ಫೇಸ್‌ಬುಕ್‌ 1.44 ಕೋಟಿ ರೂ. ಆಫ‌ರ್‌ ನೀಡಿದ ಬೆನ್ನಲ್ಲೇ, ಇನ್ನೂ ವ್ಯಾಸಂಗ ಪೂರೈಸದ 20 ವರ್ಷದ ಯುವತಿಯೊಬ್ಬಳಿಗೆ ಫೇಸ್‌ಬುಕ್‌ ಬರೋಬ್ಬರಿ 2 ಕೋಟಿ ರೂ. ಆಫ‌ರ್‌ ನೀಡಿದೆ. ಐಐಟಿ ಬಾಂಬೆ ಪದವಿ ವಿದ್ಯಾರ್ಥಿನಿ ಆಸ್ಥಾ ಅಗರವಾಲ್‌ ಈ ಆಫ‌ರ್‌ ಪಡೆದ ಅದೃಷ್ಟವಂತೆ. ಇದು ದೇಶದಲ್ಲೇ ಪದವಿ ವಿದ್ಯಾರ್ಥಿಯೊಬ್ಬರು ಪಡೆಯುತ್ತಿರುವ ಅತಿ ಹೆಚ್ಚು ಸಂಬಳ ಎನ್ನಲಾಗಿದೆ. 3ನೇ ವರ್ಷ ಕಂಪ್ಯೂಟರ್‌ ಸೈನ್ಸ್‌ ವಿದ್ಯಾರ್ಥಿನಿ ಆಸ್ಥಾ, ತಾನು ಕ್ಯಾಲಿಫೋರ್ನಿಯಾದ ಫೇಸ್‌ಬುಕ್‌ ಕಂಪನಿಯಲ್ಲಿ 2 ತಿಂಗಳ ತರಬೇತಿ ಪಡೆದಿದ್ದು, ತನ್ನ ಸಾಮರ್ಥ್ಯವನ್ನು ಗುರುತಿಸಿ ಅವಧಿಗಿಂತ ಮೊದಲೇ ತನಗೆ ಕೆಲಸ ನೀಡಿದ್ದಾರೆ ಎಂದು ಹೇಳಿದ್ದಾಳೆ. 2015ರಲ್ಲಿ ನಾನು ಫೇಸ್‌ಬುಕ್‌ ಸೇರಲಿದ್ದೇನೆ ಎಂದು ಈಕೆ ಹೇಳಿದ್ದಾಳೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com