ಬಾಳೆಬರೆ ಘಾಟಿ: ಗೋಡೆಗೆ ಆಗ್ರಹ

ಹೊಸಂಗಡಿ: ಸಮೀಪದ ಬಾಳೆಬರೆ ಘಾಟಿಯ ತಿರುವುಗಳಲ್ಲಿ ತಡೆಗೋಡೆ ನಿರ್ಮಿಸು ವಂತೆ ನಾಗರಿಕರು ಆಗ್ರಹಿಸಿದ್ದಾರೆ. ಘಾಟಿ ಮಾರ್ಗದ ಪ್ರಮುಖ ತಿರುವುಗಳಲ್ಲಿ ತಡೆಗೋಡೆ ಇಲ್ಲದಿ ರುವುದು ಅಪಾಯಕ್ಕೆ ಕಾರಣವಾಗಿದೆ. ಈಗಾಗಲೆ ಅನೇಕ ವಾಹನಗಳು ಪ್ರಪಾತಕ್ಕೆ ಉರುಳಿವೆ. ಘಾಟಿಯಲ್ಲಿನ ಚಂಡಿಕಾಂಬಾ ದೇವಸ್ಥಾನ ಸಮೀಪ ಮುಖ್ಯ ತಿರುವಿನಲ್ಲಿ ತಡೆಗೋಡೆ ಇಲ್ಲದಿರುವುದು ವಾಹನ ಚಾಲಕರ ಪಾಲಿಗೆ ಭೀತಿ ಹುಟ್ಟಿಸಿದೆ. ಸಂಬಂಧಿತ ಇಲಾಖೆ ಗಮನಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ. 

ಬಾಳೆಬರೆ ಘಾಟಿಯಲ್ಲಿನ ರಸ್ತೆ ಅಲ್ಲಲ್ಲಿ ಜರ್ಜರಿತವಾಗಿದೆ. ಮಳೆಗಾಲದ ಮೊದಲು ದುರಸ್ತಿ ಕಂಡುಕೊಂಡಿದ್ದ ಘಾಟಿ ಹೆದ್ದಾರಿಯಲ್ಲಿ ಬಹತ್ ಗುಂಡಿಗಳು ಸಷ್ಟಿಯಾಗಿವೆ. ಘಾಟಿ ತಿರುವಿನಲ್ಲಿ ಉಂಟಾಗಿರುವ ಹೊಂಡಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಸಂಬಂಧಿತ ಇಲಾಖೆ ಗಮನಹರಿಸಿ ಹೆದ್ದಾರಿ ಹೊಂಡ ದುರಸ್ತಿಗೊಳಿಸಬೇಕೆಂಬ ಆಗ್ರಹ ಕೇಳಿಬಂದಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com