ಡಿ.19-20: ಉಜಿರೆಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ

ಬೆಳ್ತಂಗಡಿ: ತಾಲೂಕಿನ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನಲ್ಲಿ "ಆಧುನಿಕ ಕನ್ನಡ ಸಾಹಿತ್ಯದ ಪಲ್ಲಟಗಳು ಎಂಬ ವಿಷಯದ ಕುರಿತಾಗಿ ರಾಷ್ಟ್ರೀಯ ವಿಚಾರ ಸಂಕಿರಣ ಡಿಸೆಂಬರ್ 19 ಮತ್ತು 20 ರಂದು ನಡೆಯಲಿದೆ.
      ಕಾಲೇಜಿನ ಕನ್ನಡ ವಿಭಾಗ ಮತ್ತು ದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಸಹಭಾಗಿತ್ವದಲ್ಲಿ ನಡೆಯಲಿರುವ ವಿಚಾರ ಸಂಕಿರಣದ ಪ್ರಾಜೋಜಕತ್ವವನ್ನು ಯುಜಿಸಿ ವಹಿಸಲಿದೆ. ವಿಚಾರ ಸಂಕಿರಣದಲ್ಲಿ ಕಥನ ಸಾಹಿತ್ಯ ರಚನೆ ಮತ್ತು ವಿನ್ಯಾಸ, ಹೊಸ ತಲೆಮಾರಿನ ಕಥನ ಸಾಹಿತ್ಯದ ತಾತ್ವಿಕ ನೆಲೆ, ಕಾವ್ಯ ಸಾಹಿತ್ಯ ರಚನೆ ಮತ್ತು ವಿನ್ಯಾಸ, ಹೊಸ ತಲೆಮಾರಿನ ಕಾವ್ಯದ ತಾತ್ವಿಕ ನೆಲೆ, ಅಂಕಣ ಬರಹಗಳ ರಚನೆ ಮತ್ತು ವಿನ್ಯಾಸ, ಹೊಸ ತಲೆಮಾರಿನ ಅಂಕಣ ಸಾಹಿತ್ಯದ ತಾತ್ವಿಕ ನೆಲೆ, ಹೊಸ ಶತಮಾನದ ವಿಮರ್ಶೆ ಈ ವಿಚಾರಗಳು ವಿಚಾರ ಸಂಚಿರಣದ ಪ್ರಧಾನ ಆಂಶಗಳಾಗಿದ್ದು, ಪ್ರಬಂಧ ಮಂಡಿಸಲು ಅವಕಾವಿದೆ. ವಸತಿ ಸಹಿತ ಪ್ರತಿನಿಧಿ ಶುಲ್ಕ ರೂ 200 (ಸಂಶೋಧನಾ ವಿದ್ಯಾಥರ್ಿಗಳಿಗೆ ರಿಯಾಯಿತಿ ಇದೆ.) ಆಗಿದ್ದು ಡಿಸೆಂಬರ್ 08ರ ಒಳಗಾಗಿ ನೋಂದಾವಣೆ ಮಾಡಿಕೊಳ್ಳತಕ್ಕದ್ದು ಮಾಹಿತಿಗೆ ಅ. ಪ. ರಕ್ಷಿತ್ 9008697143  ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com