ಅತಿಕ್ರಮಣ ತೆರವಿಗೆ ವಾರದ ಗಡುವು

ಬೈಂದೂರು: ಪ್ರಧಾನಮತ್ರಿ ಗ್ರಾಮ-ಸಡಕ್ ಯೋಜನೆ ಹಂತ 2ರಲ್ಲಿ ಮಂಜೂರಾದ ಬೈಂದೂರು-ಗಂಗನಾಡು ರಸ್ತೆ ಕಾಮಗಾರಿಗೆ ಆರಂಭಿಕ ಹಂತದಲ್ಲಿಯೇ ರಸ್ತೆ ಬದಿಯಲ್ಲಿ ಜಾಗ ಅತಿಕ್ರಮಣಗೊಂಡಿರುವುದರಿಂದ ಕಾಮಗಾರಿ ಸ್ಥಗಿತಗೊಳ್ಳುವ ಭೀತಿ ಎದುರಿಸುತ್ತಿದೆ. ಈಗಾಗಲೇ ರಸ್ತೆಯ ಬದಿಯಲ್ಲಿರುವ ಕಟ್ಟಡಗಳಿಗೆ ಪರಿಹಾರ ನೀಡಿದರೂ ಸಹ ಜಾಗ ತೆರವುಗೊಳಿಸದೇ ಇರುವುದರಿಂದ ಕಾಗಾರಿಗೆ ತೊಂದರೆಯಾಗುತ್ತಿದೆ. 

ಈ ಬಗ್ಗೆ ಎಂಜಿನಿಯರ್‌ರವರು ತಹಸೀಲ್ದಾರರ ಗಮನಕ್ಕೆ ತಂದಿದ್ದು, ತಹಸೀಲ್ದಾರರು ವಾರದೊಳಗೆ ರಸ್ತ ಬದಿಯಲ್ಲಿರುವ ಅತಿಕ್ರಮಣ ಜಾಗವನ್ನು ತೆರವುಗೊಳಿಸಬೇಕೆಂದು ಸಂಬಂಧಿತರಿಗೆ ಸೂಚನೆ ನೀಡಿದ್ದು, ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com