ಡಿ.6&7: ಕೋಟೇಶ್ವರದಲ್ಲಿ ಕಾರ್ಟೂನು ಹಬ್ಬ

ಕೋಟೇಶ್ವರ: ಕುಂದಾಪುರದಲ್ಲಿ ಅಪಾರ ಜನಮನ್ನಣೆ ಗಳಿಸಿದ ಕುಂದಾಪ್ರ ಕಾರ್ಟೂನು ಹಬ್ಬ ಮತ್ತೆ ಜನರ ಒತ್ತಾಯದ ಮೇರೆಗೆ ಕೋಟೆಶ್ವರದಲ್ಲಿ ಪ್ರದರ್ಶನಕ್ಕೆ ಸಜ್ಜಾಗಿದೆ. ಡಿ6&7ರಂದು ಕೊಡಿ ಹಬ್ಬದ ಸಂದರ್ಭದಲ್ಲಿ ಕೋಟೇಶ್ವರ ವಿಶ್ವಕರ್ಮ ಕಲ್ಯಾಣಮಂಟಪದಲ್ಲಿ ಜರುಗುತ್ತಿರುವ ಕಾರ್ಟೂನು ಹಬ್ಬ ಹಿಂದಿನ ಎಲ್ಲಾ ವಿಶೇಷತೆಗಳನ್ನು ಒಳಗೊಂಡು ಕಾರ್ಟೂನು ಪ್ರೀಯರ ಮನತಣಿಸಲಿದೆ.
     ಕುಂದಾಪುರದಲ್ಲಿ ಕಾರ್ಟೂನು ಹಬ್ಬ ನಡೆದ ಬಳಿಕ ರಾಜ್ಯದ ವಿವಿಧೆಡೆಯಿಂದ ಕಾರ್ಯಕ್ರಮ ಆಯೋಜಿಸುವಂತೆ ಸತೀಶ್ ಆಚಾರ್ಯ ಅವರಿಗೆ ಆಹ್ವಾನ ಬಂದಿತ್ತು. ಮತ್ತೆ ಕೋಟೆಶ್ವರದಲ್ಲಿ ಕಾರ್ಟೂನು ಹಬ್ಬ ಆಯೋಜಿಸುತ್ತಿರುವುದಕ್ಕೆ ಹಲವು ಕಾರ್ಟೂನು ಪ್ರೀಯರು ಸಂತಸ ವ್ಯಕ್ತಪಡಿಸಿದ್ದರು. ಒಟ್ಟಿನಲ್ಲಿ ಕರಾವಳಿಯ ಅತಿದೊಡ್ಡ ಜಾತ್ರೆ ಎಂದೆನಿಸಿಕೊಂಡಿರುವ ಕೊಡಿಹಬ್ಬದಲ್ಲಿ ಕಾರ್ಟೂನು ಹಬ್ಬವನ್ನು ಆಯೋಜಿಸುತ್ತಿರುವುದು ಹಬ್ಬಕ್ಕೆ ವಿಶೇಷ ಕಳೆ ಬಂದಂತಾಗಿದೆ.

ಕಾರ್ಟೂನು ಹಬ್ಬದಲ್ಲಿ ಏನೇನಿರುತ್ತೆ?
ಕಾರ್ಟೂನ್ ಪ್ರದರ್ಶನ - ಕುಂದಾಪುರ ಮೂಲದವರಾಗಿದ್ದು ದೇಶದ ಪ್ರಸಿದ್ಧ ಪತ್ರಿಕೆ ಹಾಗೂ ವೆಬ್-ಸೈಟ್ ಗಳಿಗೆ ಕಾರ್ಟುನ್ ನೀಡುತ್ತಿರುವವರ ಕಾರ್ಟೂನ್ ಪ್ರದರ್ಶನ
ಕಾರ್ಟೂನ್ ಕಾರ್ಯಾಗಾರ, ಪ್ರಾತ್ಯಕ್ಷಿಕೆ - ಖ್ಯಾತ ವ್ಯಂಗ್ಯಚಿತ್ರಕಾರರಿಂದ ಸ್ಥಳದಲ್ಲೇ ಕಾರ್ಟೂನ್ ರಚನೆ ಹಾಗೂ ಆಸಕ್ತ ಸಾರ್ವಜನಿಕರಿಗೆ ಕಾರ್ಟೂನ್ ರಚಿಸಲು ಕ್ಯಾನ್ವಾಸ್
ಸ್ಥಳದಲ್ಲೇ ಕ್ಯಾರಿಕೇಚರ್ - ಕ್ಯಾರಿಕೇಚರ್ ಕೂಪನ್ ಪಡೆದವರಿಗೆ ಖ್ಯಾತ ಕಾರ್ಟೂನಿಷ್ಠಗಳಿಂದ ಕ್ಯಾರಿಕೇಚರ್ ರಚಿಸಿಕೊಡಲಾಗುವುದು.
ಸಾರ್ವಜನಿಕರಿಗೆ ವಿವಿಧ ಸ್ವರ್ಧೆಗಳು - ಕಾರ್ಟೂನ್ ಡೈಲಾಗ್ ಬರೆಯುವುದು, ಕ್ಯಾರಿಕೇಚರ್ ರಚಿಸುವುದು ಮುಂತಾದ ಸ್ವರ್ಧೆಗಳು ಹಾಗೂ ಆಕರ್ಷಕ ಬಹುಮಾನ
ಸೆಲ್ಫಿ ಕಾರ್ನರ್ - ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಲು ಇಲ್ಲವೇ ವೈಯಕ್ತಿಕ ಸಂಗ್ರಹಕ್ಕಾಗಿ ವಿಶಿಷ್ಟ ಸೆಲ್ಫಿ ಕಾರ್ನರ್
ವಿದ್ಯಾರ್ಥಿಗಳಿಗೆ ಕಾರ್ಯಾಗಾರ - ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಟೂನ್ ಕಾರ್ಯಾಗಾರ 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com