ಕೊಡಿಹಬ್ಬದ ನಡುವಲ್ಲಿ ಕಾರ್ಟೂನು ಹಬ್ಬ

ಕೋಟೇಶ್ವರ: ಕುಂದಾಪುರದಲ್ಲಿ ಅಪಾರ ಜನಮನ್ನಣೆ ಗಳಿಸಿದ ಕುಂದಾಪ್ರ ಕಾರ್ಟೂನು ಹಬ್ಬ ಮತ್ತೆ ಕೋಠಢಶ್ವರದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಹಲವು ಪ್ರಸಿದ್ಧ ವ್ಯಂಗ್ಯಚಿತ್ರಕಾರರ ವ್ಯಂಗ್ಯಚಿತ್ರಗಳು ಪ್ರದರ್ಶನಕ್ಕೆ ಕಳೆ ನೀಡಿದ್ದರೇ ಕಾರ್ಟೂನಿನ ಮೂಲಕ ಸಮಾಜಕ್ಕೆ ವಿವಿಧ ಸಂದೇಶಗಳನ್ನು ಸಾರುವ ಕಾರ್ಟೂನುಗಳು ವೀಕ್ಷಕರಲ್ಲಿ ಬೆರಗು ಮೂಡಿಸುತ್ತಿವೆ. ಕಾರ್ಟೂನು ಹಬ್ಬವನ್ನು ಸಂಘಟಿಸಿದ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರು ಕಾರ್ಟೂನು ಪ್ರೀಯರ ಕ್ಯಾರಿಕೇಚರ್ ಬಿಡಿಸುವುದರಲ್ಲಿಯೇ ಮಗ್ನರಾಗಿದ್ದಾರೆ. ಒಟ್ಟಿನಲ್ಲಿ ಕರಾವಳಿಯ ಅತಿದೊಡ್ಡ ಜಾತ್ರೆ ಎಂದೆನಿಸಿಕೊಂಡಿರುವ ಕೊಡಿಹಬ್ಬದಲ್ಲಿ ಕಾರ್ಟೂನು ಹಬ್ಬವನ್ನು ಆಯೋಜಿಸುತ್ತಿರುವುದು ಹಬ್ಬಕ್ಕೆ ವಿಶೇಷ ಕಳೆ ಬಂದಂತಾಗಿದೆ.
ಕುಂದಾಪುರ ವ್ಯಂಗ್ಯಚಿತ್ರಕಾರರಾದ ಚಂದ್ರಶೇಖರ ಶೆಟ್ಟಿ ಮೊದಲಾದವರು ಕಾರ್ಟೂನು ಹಬ್ಬದಲ್ಲಿದ್ದಾರೆ. ಕೋಟೇಶ್ವರದ ವಿಶ್ವಕರ್ಮ ಕಲ್ಯಾಣಮಂಟಪದಲ್ಲಿ ಜರುಗುತ್ತಿರುವ ಕಾರ್ಟೂನು ಹಬ್ಬ ಡಿ.6 ಮತ್ತು 7ರಂದು ಜರುಗಲಿದೆ.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com