ಕನ್ನಡ ಶಾಲೆಗಳ ಉನ್ನತೀಕರಣದಿಂದ ಭಾಷೆ ಉಳಿವು ಸಾಧ್ಯ: ಮೋಹನ ಆಳ್ವ

ಕುಂದಾಪುರ: ಕನ್ನಡವನ್ನು ಉಳಿಸಬೇಕಿದ್ದರೆ ಕನ್ನಡ ಶಾಲೆಗಳ ಉನ್ನತೀಕರಣವಾಗಬೇಕು. ಶಿಕ್ಷಣದೊಂದಿಗೆ ಭಾಷೆ ಉಳಿಯಲು ಸಾಧ್ಯ. ನ್ಯಾಯಾಂಗದ ತೀರ್ಪಿನಿಂದಾಗಿ ನಮ್ಮ ಭಾಷೆಗೆ ಪೆಟ್ಟು ಬಿದ್ದಿದೆಯಾದರೂ ಕನ್ನಡಕ್ಕೆ ಉಂಟಾಗಬಹುದಾದ ತೊಡಕುಗಳನ್ನು ಎದುರಿಸಬಹುದಾದಷ್ಟು ನಾವು ಸಮರ್ಥರಿದ್ದೇವೆ ಎಂದು ಮೂಡಬಿದ್ರೆ ಆಳ್ವಾಸ್ ಫೌಂಡೇಶನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು. ಭಾನುವಾರ ಸಂಜೆ ಇಲ್ಲಿನ ಕನ್ನಡ ವೇದಿಕೆ ರಾಜ್ಯೋತ್ಸವ ಪ್ರಯುಕ್ತ ನವಂಬರ್ ತಿಂಗಳಿಡಿ ಹಮ್ಮಿಕೊಂಡ ಕನ್ನಡ ಡಿಂಡಿಮ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.  
    ಪಂಚದ್ರಾವಿಡ ಭಾಷೆಗಳಲ್ಲಿ ಕನ್ನಡ ಒಂದು. 2 ಸಾವಿರ ಇತಿಹಾಸವಿದೆ. ಕನ್ನಡ ಭಾಷೆ ಬಹಳಷ್ಟು ಸಂಘರ್ಷ ಕಂಡಿದೆ.  ಜಾಗತೀಕರಣ ಕನ್ನಡ ಸೇರಿದಂತೆ 14 ದೇಶಿ ಭಾಷೆಗಳು ಬಹುದೊಡ್ಡ ಸವಾಲಾಗಿದೆ. ದೇಶಿ ಭಾಷೆ ಸೇರಿದಂತೆ 3 ಸಾವಿರಕ್ಕೂ ಮಿಕ್ಕಿ ಪ್ರಾದೇಶಿಕ ಭಾಷೆಗಳು ಅಪಾಯ ಎದುರಿಸುತ್ತಿದೆ. ಮೌಲ್ಯಾಧಾರಿತ ಹೋರಾಟದಿಂದ ಮಾತ್ರ ಭಾಷೆ, ಸಂಸ್ಕೃತಿ ಉಳಿಸಬಹುದು ಎಂದರು.
 ಕನ್ನಡ ವೇದಿಕೆ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ವಿದ್ವಾಂಸ ಶ್ರೀಧರ ಹಂದೆ ಉಪಸ್ಥಿತರಿದ್ದರು. 

ಈ ಸಂದರ್ಭ ರಾಷ್ಟ್ರಪ್ರಶಸ್ತಿ ವಿಜೇತ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಮತ್ತು ಅಂತರಾಷ್ಟ್ರೀಯ ಖ್ಯಾತಿಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಪ್ರಬಂಧ ಮತ್ತು ಭಾಷಣ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕ ವಿಶ್ವನಾಥ ಕರಬ ಕಾರ್ಯಕ್ರಮ ನಿರ್ವಹಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com