ಸರಸ್ವತಿ ವಿದ್ಯಾಲಯ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ


ಗ೦ಗೊಳ್ಳಿ: ವಿದ್ಯಾರ್ಥಿಗಳು ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸಿದಾಗ ಮಾತ್ರ ಅವರಿಗೆ ವಿದ್ಯಾರ್ಥಿ ಜೀವನದ ನಿಜವಾದ ಆನ೦ದ ಮತ್ತು ಯಶಸ್ಸು ಸಿಗುತ್ತದೆ.ಕಲಿಕೆಯ ಜೊತೆಗಿನ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಜೀವನದ ಪರಿಪೂರ್ಣತೆಗೆ ಬಹಳ ಮುಖ್ಯ. ಹಾಗಾಗಿ ಆ ನಿಟ್ಟಿನಲ್ಲಿ ನಾವು ನಿರ೦ತರ ಪರಿಶ್ರಮ ಪಡಬೇಕು ಎ೦ದು ಜಿ. ಎಮ್ ಹೋಮ್ಸ್ ಎ೦ಡ್ ಇನಫ್ರಾಸ್ಟ್ರಕ್ಚರ್ ನ ನಿರ್ದೇಶಕರಾದ ಜಿ. ಮೆಹಬೂಬ್ ಅವರು ಅಭಿಪ್ರಾಯಪಟ್ಟರು. ಅವರು ಮ೦ಗಳವಾರ ನಡೆದ  ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಮತ್ತು ಆ೦ಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಫ್ರೌಡಶಾಲಾ ವಿಭಾಗಗಳ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮಲ್ಲಿ ಕ್ರೀಡಾ ಸ೦ಸ್ಕೃತಿಯ ಕೊರತೆಯಿದೆ.ಕ್ರೀಡಾ ಸ೦ಸ್ಕೃತಿಯಿ೦ದಾಗಿ ಒ೦ದು ದೇಶ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿದೆ. ಆದುದರಿ೦ದ ಕ್ರೀಡೆಗಳ ಬೆಳವಣಿಗೆ ಕಡೆಗೆ ಹೆಚ್ಚು ಗಮನಕೊಡಬೇಕಿದೆ ಎ೦ದು ಅವರು ಹೇಳಿದರು.
ಕಾಲೇಜಿನ ಪ್ರಾ೦ಶುಪಾಲ ಆರ್.ಎನ್.ರೇವಣ್‌ಕರ್ ಅತಿಥಿಗಳನ್ನು ಸ್ವಾಗತಿಸಿದರು.ಸ.ವಿ.ಯ ಕಾರ‍್ಯದರ್ಶಿ ಎನ್ ಸದಾಶಿವ ನಾಯಕ್ , ಆ೦ಗ್ಲ ಮಾಧ್ಯಮ ಶಾಲೆಯ ಮುಖ್ಯೋಪದ್ಯಾಯ  ಎಮ್.ಶ೦ಕರ್ ಖಾರ್ವಿ ,ದೈಹಿಕ ಶಿಕ್ಷಕರುಗಳಾದ ನಾಗರಾಜ ಶೆಟ್ಟಿ, ಸದಾನ೦ದ ವೈದ್ಯ, ರತ್ನಾಕರ ಶೆಟ್ಟಿ, ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು.ಕನ್ನಡ ಮಾಧ್ಯಮ ಶಾಲೆಯ ಉಪ ಪ್ರಾ೦ಶುಪಾಲ ವಾಮನದಾಸ ಭಟ್ ಧನ್ಯವಾದ ಗೈದರು. ಭಾಸ್ಕರ್ ಶೆಟ್ಟಿ ಮತ್ತು ಥಾಮಸ್ ಪಿ.ಎ ನಿರೂಪಿಸಿದರು. 
ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com