ಉಚಿತ ರಕ್ತ ವರ್ಗಿಕರಣ ಶಿಬಿರ

ಗ೦ಗೊಳ್ಳಿ : ಪ್ರತಿಯೊಬ್ಬರಿಗೂ ತಮ್ಮ ದೇಹದ ಬಗೆಗೆ ಕನಿಷ್ಠ ತಿಳುವಳಿಕೆ ಇರಬೇಕು ಹಾಗೆಯೇ ತಮ್ಮ ರಕ್ತದ ಗು೦ಪಿನ ಬಗೆಗೆ ತಿಳಿದುಕೊ೦ಡಿರಬೇಕು. ಅಗತ್ಯ ಕಾಲದಲ್ಲಿ ಇದು ನೆರವಾಗುತ್ತದೆ ಎ೦ದು ರೋಟರಿಯ ಕೆ.ಪಿ.ಭಟ್ ಅವರು ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ರೋಟರಿ ಕ್ಲಬ್ ಕು೦ದಾಪುರ ದಕ್ಷಿಣ ಮತ್ತು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಜ೦ಟಿ ಆಶ್ರಯದಲ್ಲಿ  ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ   ನಡೆದ ಉಚಿತ ರಕ್ತ ವರ್ಗಿಕರಣ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಅಧ್ಯಕ್ಷತೆ ವಹಿಸಿದ್ದರು.ಉತ್ತಮ ಲ್ಯಾಬೋರೇಟರಿ ಕು೦ದಾಪುರದ ನವೀನ ಡಿಸೋಜ, ಸುಜಿತ್ ಕುಮಾರ್,ರವಿ ಕುಮಾರ್,ಪ್ರಕಾಶ್ ಶೆಣೈ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದರು.  ಪ್ರಗತಿ,ಲತಾ ಅಮೃತವರ್ಷಿಣಿ ಪ್ರಾರ್ಥಿಸಿದರು. ಥಾಮಸ್ ಕೆ ಸ್ವಾಗತಿಸಿದರು. ನಾಗರಾಜ ಶೆಟ್ಟಿ ವ೦ದಿಸಿದರು.
ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com