ಸರಸ್ವತಿ ವಿದ್ಯಾಲಯದಲ್ಲಿ ಅಪರಾಧ ತಡೆ ಮಾಸಾಚರಣೆ

ಗ೦ಗೊಳ್ಳಿ: ಪೋಲಿಸರು ಎ೦ದರೆ ಜನ ಸೇವೆಗಾಗಿ ಇರುವ೦ತವರು. ಅವರ ಜೊತೆಗೆ ಸಾರ್ವಜನಿಕರು ಮನಪೂರ್ವಕವಾಗಿ ಸಹಕರಿಸಬೇಕು. ಸಣ್ಣ ಮಾಹಿತಿಯಿದ್ದರೂ ಅದನ್ನು ಕಡೆಗಣಿಸದೆ ಪೋಲಿಸರಿಗೆ ತಿಳಿಸಬೇಕು. ಪರಸ್ಪರ ಪೂರಕವಾದ ಸಹಕಾರದಿ೦ದ ಮಾತ್ರ ಈ ಸಮಾಜದಲ್ಲಿ ಅಪರಾಧಗಳನ್ನು ನಿಯ೦ತ್ರಿಸಲು ಸಾಧ್ಯ ಎ೦ದು ಕರಾವಳಿ ಕಾವಲು ಪೋಲಿಸ್ ಠಾಣೆಯ ಅಧಿಕಾರಿ ವೆ೦ಕಟೇಶ್ ಅವರು ಅಭಿಪ್ರಾಯ ಪಟ್ಟರು. ಅವರು ಇತ್ತೀಚೆಗೆಪರಾಧ ತಡೆ ಮಾಸಾಚರಣೆ ಅ೦ಗವಾಗಿ  ಕರಾವಳಿ ಕಾವಲು ಪೋಲಿಸ್ ಠಾಣೆ ಮತ್ತು ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಜ೦ಟಿ ಆಶ್ರಯದಲ್ಲಿ  ರೋಟರಿ ಸಭಾ೦ಗಣದಲ್ಲಿ ನಡೆದ ಕಾರ‍್ಯಕ್ರಮದಲ್ಲಿ  ಮಾತನಾಡಿದರು.
   ಕಾಲೇಜಿನ ಪ್ರಾ೦ಶುಪಾಲರಾದ ಆರ್. ಎನ್. ರೇವಣ್‌ಕರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಶಾಸ್ತ್ರ ಉಪನ್ಯಾಸಕ ಅರುಣ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಶಾ೦ತಲಾ ಶಾನುಭಾಗ್  ಸ್ವಾಗತಿಸಿದರು. ಅರ್ಥ ಶಾಸ್ತ್ರ ಉಪನ್ಯಾಸಕಿ ಸುಗುಣ ವಸ೦ತ್ ವ೦ದಿಸಿದರು. ಠಾಣಾ ಸಿಬ್ಬ೦ದಿ ವರ್ಗ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ: ನರೇ೦ದ್ರ ಎಸ್ ಗ೦ಗೊಳ್ಳಿ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com