ಗುರುಕುಲ: ಯಾಜ್ಞವಲ್ಕ್ಯ, ಕಲಾಂಗಣ ಕಟ್ಟಡ ಉದ್ಘಾಟನೆ

ಕುಂದಾಪುರ: ಬಾಂಡ್ಯಾ ಎಜ್ಯುಕೇಶನಲ್ ಟ್ರಸ್ಟ್(ರಿ)ನ ಅಧೀನದ ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯ ನೂತನ ಕಟ್ಟಡ ಯಾಜ್ಞವಲ್ಕ್ಯವನ್ನು ಬಸ್ರೂರು ಅಪ್ಪಣ್ಣ ಹೆಗ್ಡೆಯವರ 80 ನೇ ಹುಟ್ಟು ಹಬ್ಬದ ಶುಭಾಂಶನೆ ಕಾರ್ಯಕ್ರಮದಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವಿರೇಂದ್ರ ಹೆಗ್ಗಡೆ ಉದ್ಘಾಟಿಸಿದರು.

ಈ ಸಂದರ್ಭ ಡಾ.ಹೆಗ್ಗಡೆ ಮಾತನಾಡಿ ಯಜ್ಞವಲ್ಕ್ಯನಂತಹ ಮಹಾನ್ ಗುರುವಿನ ಹೆಸರನ್ನು ಈ ಕಟ್ಟಡಕ್ಕೆ ಇಟ್ಟಿರುವುದು ಸಮಯೋಚಿತವಾಗಿದೆ. ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಯಾಜ್ಞವಲ್ಕ್ಯನಂತೆ ಶ್ರೇಷ್ಠ ಜ್ಞಾನಿಗಳಾಗಿ ಪರಂಪರೆಯನ್ನು ಸಷ್ಟಿಸಲಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ಆವರಣದಲ್ಲಿ ನಿರ್ಮಿಸಲಾಗಿರುವ ಪಠ್ಯೇತರ ಚಟುವಟಿಕೆಗಳ ಕಟ್ಟಡ ಕಲಾಂಗಣವನ್ನುಬೆಂಗಳೂರು ರಾಮಕಷ್ಣ ಮಠದ ಶ್ರೀತ್ಯಾಗೇಶ್ವರಾನಂದ ಸ್ವಾಮಿ ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ ನೈತಿಕತೆ ಪ್ರತಿಯೊಬ್ಬ ಮನುಷ್ಯನ ಜವಾಬ್ದಾರಿ. ಇಂದಿನ ಸಮಾಜದಲ್ಲಿ ಮಕ್ಕಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಮೈದುಂಬಿಸಿಕೊಂಡು ಭವಿಷ್ಯದ ಭದ್ರ ಸಮಾಜಕ್ಕೆ ಬುನಾದಿ ಆಗಲಿದ್ದಾರೆ. ಗುರುಕುಲದಲ್ಲಿ ಇಂತಹ ಒಂದು ವೇದಿಕೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಎಂದು ಶ್ಲಾಘಿಸಿದರು.

ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ, ಗುರುಕುಲ ವಿದ್ಯಾಸಂಸ್ಥೆಯ ಅಧ್ಯಕ್ಷ ಬಸ್ರೂರು ಅಪ್ಪಣ್ಣ ಹೆಗ್ಡೆ, ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ರಾಮಕಿಶನ್ ಹೆಗ್ಡೆ, ಬಾಂಡ್ಯಾ ಎಜ್ಯುಕೇಶನಲ್ ಟ್ರಸ್ಟ್(ರಿ)ನ ಜಂಟಿ ಕಾರ್ಯನಿರ್ವಹಣಾಧಿಕಾರಿಗಳಾದ ಬಾಂಡ್ಯಾ ಸುಭಾಶ್ಚಂದ್ರ ಶೆಟ್ಟಿ ಮತ್ತು ಅನುಪಮಾ ಎಸ್ ಶೆಟ್ಟಿ, ಆಡಳಿತಾಧಿಕಾರಿ ಡಾ.ಜಿ.ಎಚ್ ಪ್ರಭಾಕರ ಶೆಟ್ಟಿ, ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಯಪ್ರಕಾಶ ಮಾವಿನಕುಳಿ, ಗುರುಕುಲ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ರೂಪಾ ಶೆಣೈ ಮೊದಲಾದವರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com