ಬಾಲಕನ ಶ್ರವಣ ಚಿಕಿತ್ಸೆಗೆ ನೆರವು ನೀಡಿ

     ಮೊಳಹಳ್ಳಿ ಗ್ರಾಮದ ಗಂಗಾಮಕ್ಕಿ ನಿವಾಸಿ ಗಣಪತಿ ಅವರ ಮೂರೂವರೆ ವರ್ಷದ ಪುತ್ರ ರಾಘವೇಂದ್ರ ಹುಟ್ಟಿನಿಂದಲೇ ತನ್ನ ಶ್ರವಣ ಶಕ್ತಿಯನ್ನು ಕಳೆದುಕೊಂಡಿದ್ದು, ಇದರ ಚಿಕಿತ್ಸೆಗೆ ನೆರವು ನೀಡುವಂತೆ ಹೆತ್ತವರು ಮನವಿ ಮಾಡಿದ್ದಾರೆ.
   ಗಣಪತಿ ಹಾಗೂ ಗೀತಾ ದಂಪತಿಯ ಏಕೈಕ ಪುತ್ರನಾಗಿರುವ ರಾಘವೇಂದ್ರ ಬಹಳಷ್ಟು ಚಟುಟವಟಿಕೆಯಿಂದ ಕೂಡಿದವನಾಗಿದ್ದರೂ ಬಾಲ್ಯದಲ್ಲಿ ಅಂಟಿಕೊಂಡ ಕಿವುಡುತನ ಈತನಿಗೆ ಶಾಪವಾಗಿ ಪರಿಗಣಿಸಿದೆ. 
   ಕಿವುಡುತನದ ಅರಿವೇ ಇಲ್ಲದ ಬಾಲಕನ ಪಾಲಕರು ಒಮ್ಮೆಲೇ ತಿಳಿದಾಗ ದಿಗ್ಬಾಂತ್ರರಾಗಿದ್ದಾರೆ. ಎರಡೂ ಕಿವಿಗಳು ಕೇಳಿಸದೇ ಇರುವುದರಿಂದ ಮಾತನಾಡಲು ಸಹ ಕಷ್ಟ ಪಡುವ ಈ ಬಾಲಕನಿಗೆ ಈ ಹಿಂದೆ ಈ ಕಾರಣದಿಂದ ಬೇರೆ ಬೇರೆ ವೈದ್ಯರಲ್ಲಿ ತಪಾಸಣೆ ನಡೆಸಲಾಯಿತು. ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿದರೂ ಖಾಯಿಲೆ ಗುಣಮುಖವಾಗಲಿಲ್ಲ.
   ಅನೇಕ ವೈದ್ಯರಲ್ಲಿ ತೋರಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಾಲಕನ ತಂದೆ ಹೋಟೇಲ್‌ನಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಈಗಾಗಲೇ ಮಗನ ಚಿಕಿತ್ಸೆಗಾಗಿ ಹಣ ವ್ಯಯಿಸಿದ್ದಾರೆ. ಈಗ ಹೆಚ್ಚಿನ ಚಿಕಿತ್ಸೆಗಾಗಿ ಬಾಲಕನನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಮೆಡಿಕೆರಿಸ್‌ ಸೂಪರ್‌ ಸ್ಪೆಷಾಲಿಟಿ ಇ.ಎನ್‌.ಟಿ. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಅವರು ಬಾಲಕನ ಚಿಕಿತ್ಸೆಗೆ ಸುಮಾರು 
   ಹತ್ತು ಲಕ್ಷ ರೂ. ವೆಚ್ಚ ತಗಲಬಹುದೆಂದು ವೈದ್ಯರು ತಿಳಿಸಿದ್ದಾರೆ. ಇದರಿಂದಾಗಿ ಬಾಲಕನ ಕಿವಿ ಕೇಳಸಬಹುದಾಗಿ ತಿಳಿಸಿದ್ದಾರೆ. ಆದ್ದರಿಂದ ಬಾಲಕನ ಚಿಕಿತ್ಸೆಗೆ ನೆರವು ನೀಡುವಂತೆ ಹೆತ್ತವರು ಮನವಿ ಮಾಡಿದ್ದಾರೆ.
   ಶಂಕರನಾರಾಯಣದ ಸಿಂಡಿಕೇಟ್‌ ಬ್ಯಾಂಕಿನಲ್ಲಿ ಬಾಲಕ ರಾಘವೇಂದ್ರ ಹಾಗೂ ಅವರ ತಾಯಿಯ ಹೆಸರಿನಲ್ಲಿ ಜಂಟಿ ಕಾತೆ ತೆರೆಯಲಾಗಿದ್ದು ಸಹಾಯ ನಿಇಡುವವರು ಖಾತಾನಂಬ್ರ ನಂಬ್ರ 01322200094024 ಇದಕ್ಕೆ ಹಣ ಕಳುಹಿಸಬಹುದು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com