ಜನತಾ ಪ್ರೌಢ ಶಾಲೆ-ಕಾಲೇಜು ವಾರ್ಷಿಕೋತ್ಸವ

ಹೆಮ್ಮಾಡಿ: ಬದುಕು ಎಲ್ಲಕ್ಕಿಂತ ದೊಡ್ಡದು ಅದು ವಿಕಾಸವಾಗಲು ಜ್ಞಾನ ಅವಶ್ಯಕ. ವಿದ್ಯಾರ್ಥಿಗಳು ಪಾಠ, ಪಠ್ಯೇತರ ಚಟುವಟಿಕೆಗಳ ಜೊತೆಯಲ್ಲಿ ತಂದೆ ತಾಯಿ ಆಚಾರ- ವಿಚಾರ, ನೀತಿ, ನಡತೆಗಳನ್ನು ಮೈಗೂಡಿಸಿಕೊಂಡಾಗ ಮಾನವೀಯ ಮೌಲ್ಯ, ಶೃದ್ಧೆ, ನಿಷ್ಠೆಯಿಂದ ಸುಜ್ಞಾನವಂತರಾದ ವಿದ್ಯಾರ್ಥಿಗಳು ಸಮಾಜದ ಒಳಿತಿಗಾಗಿ ವ್ಯಯಿಸಬೇಕು ಎಂದು ಬೈಂದೂರು ಶಾಸಕ, ಹೆಮ್ಮಾಡಿ ಶ್ರೀ.ವಿ.ವಿ.ವಿ.ಮಂಡಲದ ಅಧ್ಯಕ್ಷ ಕೆ.ಗೋಪಾಲ ಪೂಜಾರಿ ಹೇಳಿದರು.
ಅವರು ಹೆಮ್ಮಾಡಿ ಶ್ರೀ.ವಿ.ವಿ.ವಿ.ಮಂಡಳಿ(ರಿ) ಇದರ ಆಡಳಿತಕ್ಕೊಳಪಟ್ಟ ಜನತಾ ಪ್ರೌಢ ಶಾಲೆ, ಜನತಾ ಸ್ಚತಂತ್ರ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೆಮ್ಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ದ್ವಜಾರೋಹಣಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಭಾಸ್ಕರ್ ಶೆಟ್ಟಿ ಶುಭಾಶಂಸನೆಗೈದರು. ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ.ನೇರಿ ಕರ್ನೇಲಿಯೊ ನಿಯೋಜಿತ ಭಾಷಣ ಮಾಡಿದರು. ಕರ್ನಾಟಕ ಯಕ್ಷಗಾನ ಬಯಲಾಟ ಆಕಾಡೆಮಿ ಸದಸ್ಯ ಕೆ.ಎಮ್.ಶೇಖರ್ ಸ್ವಸ್ತಿವಾಚನ ಭಾಷಣ ಮಾಡಿದರು.
      ಸಭೆಯಲ್ಲಿ ಜಿ.ಪಂ.ಸದಸ್ಯ ಆನಂತ ಮೊವಾಡಿ, ಆಡಳಿತ ಮಂಡಳಿ ಸದಸ್ಯರಾದ ಸಾಧು ಎಸ್ ಬಿಲ್ಲವ, ಶೀನ ಪೂಜಾರಿ, ಉಪಾಧ್ಯಕ್ಷ ವಾಮನ ಪೈ,  ಸಂಘಟನಾ ಕಾರ್ಯದರ್ಶಿ ಶಂಕರ್.ಎ.ಪಿ, ಬೈಂದೂರು ರತ್ತು ಬಾ ಪ್ರೌಢ ಶಾಲಾ ಮುಖೋಪಾಧ್ಯಾಯ ಜಿ.ಎಸ್.ಭಟ್, ಜನತಾ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಬಿ.ಮೋಹನದಾಸ ಶೆಟ್ಟಿ, ಜನತಾ ಪ.ಪೂ.ಕಾಲೇಜು ಪ್ರಾಂಶುಪಾಲ ಸಿ.ಸೀತಾರಾಮ ಮಧ್ಯಸ್ಥ, ವಿದ್ಯಾಥಿ ಸರ್ಕಾರದ ನಾಯಕಿ ಸ್ವಾತಿ, ವಿದ್ಯಾರ್ಥಿ ವೇದಿಕೆ ಅಧ್ಯಕ್ಷ ರಕ್ಷತ್, ಶಾರದ ದೇವಾಡಿಗ ಉಪಸ್ಥಿತರಿದ್ದರು. ಸುದೀರ್ಘವಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಂದಿ ದೇವಾಡಿಗ ಸುಳ್ಸೆ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಮಟ್ಟಕ್ಕೆ ಆಯ್ಕೆಯಾದ  ಅಂಗವಿಕಲ ಕ್ರೀಡಾ ಪ್ರತಿಭೆ ರಮ್ಯ ಅವರನ್ನು ಅಭಿನಂದಿಸಲಾಯಿತು.
ಹೈಸ್ಕೂಲ್ ವಿಭಾಗದ ದಿನಕರ್, ವಿಠಲ್ ನಾಯ್ಕ್, ದೈಹಿಕ ಶಿಕ್ಷಕ ದೇವೆಂದ್ರ ನಾಯ್ಕ್ ಕಾಲೇಜು ವಿಭಾಗದ ಮಂಜುನಾಥ.ಕೆ.ಎಸ್, ಗೀತಾ ಜೋಷಿ, ಹರೀಶ್ ಕಾಂಚನ್ ವಿಜೇತರ ವಿವಿಧ ಪಟ್ಟಿವಾಚಿಸಿದರು.
ಆಡಳಿತ ಮಂಡಳಿಯ ಸಂಘಟನಾ ಕಾರ್ಯದರ್ಶಿ ಶಂಕರ.ಎ.ಪಿ ಸ್ವಾಗತಿಸಿದರು. ಜಗದೀಶ್ ಶೆಟ್ಟಿ, ಮಂಜುನಾಥ್ ಚಂದನ್ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ್ ವಕ್ವಾಡಿ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com