ಜಾನಪದ ನೃತ್ಯ ತರಬೇತಿ ಕಾರ್ಯಾಗಾರ ಉದ್ಘಾಟನೆ

ಬೈಂದೂರು: ಕರ್ನಾಟಕ ಜನಪದ ಅಕಾಡೆಮಿ, ಕನ್ನಡ ಮತು ಸಂಸ್ಕೃತಿ ಇಲಾಖೆ ಬೆಂಗಳೂರು ಆಶ್ರಯದಲ್ಲಿ ಸುರಭಿ (ರಿ.) ಬೈಂದೂರು ಹಾಗೂ ಸಂಚಲನ(ರಿ.) ಹೊಸೂರು ಸಹಕಾರದಲ್ಲಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಗುರುಶಿಷ್ಯ ಪರಂಪರೆ ಯೋಜನೆಯಡಿ ನಡೆಯಲಿರುವ ಮರಾಠಿ ಜಾನಪದ ನೃತ್ಯ ತರಬೇತಿ ಕಾರ್ಯಗಾರದ ಉದ್ಘಾಟನಾ ಸಮಾರಂಭ ಬೈಂದೂರು ಮುಲ್ಲಿಬಾರಿನ ಹೊಂಗಿರಣ ಸಭಾಂಗಣದಲ್ಲಿ ಜರುಗಿತು.

    ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟಾರ್ ಬಿ. ಎನ್. ಪರಡ್ಡಿ ಕಾರ್ಯಾಗಾರವನ್ನು ಜನಪದ ವಾದ್ಯ ಪರಿಕರವಾದ ಗುಮ್ಟೆಯನ್ನು ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಕರ್ನಾಟಕದಲ್ಲಿ ಪುರಾತನ ಹಾಗೂ ವೈವಿಧ್ಯಮಯವಾದ ಹಲವಾರು ಜಾನಪದ ಕಲೆಗಳಿದ್ದು ಅವುಗಳು ಅಳಿವಿನಂಚಿನಲ್ಲಿದೆ. ಅಕಾಡೆಮಿಯ ಮೂಲಕ ನಮ್ಮ ಹಿಂದಿನ ಪರಂಪರೆಯನ್ನು ಉಳಿಸಿ ನಶಿಸುತ್ತಿರುವ ಕಲೆಯ ಬಗ್ಗೆ ಮೂರು ತಿಂಗಳುಗಳ ಕಾಲ ಪರಿಣತರಿಂದ ತರಬೇತಿ ನೀಡಿ ನಗರ ಪ್ರದೇಶಗಲ್ಲಿ ಪ್ರದರ್ಶನ ಏರ್ಪಡಿಸಿ ಆ ಕಲೆಗೆ ಜೀವ ತುಂಬಲಾಗುತ್ತಿದೆ ಎಂದ ಅವರು ಸದ್ಯದಲ್ಲಿ ಉಡುಪಿ ಜಿಲ್ಲಾ ಜಾನಪದ ಉತ್ಸವವನ್ನು ಆಯೋಜಿಸುವ ಯೋಜನೆ ಇದ್ದು, ಸ್ಥಳ ಹಾಗೂ ಸ್ಥಳೀಯ ಸಂಪನ್ಮೂಲಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದರು. 
ಯಡ್ತರೆ ಗ್ರಾ. ಪಂ. ಅಧ್ಯಕ್ಷ ನಾಗರಾಜ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
      ಗ್ರಾ. ಪಂ ಸದಸ್ಯ ಸಿ. ಜೆ. ರೋಯಿ, ಸಂಚಲನ ಹೊಸೂರು ಅಧ್ಯಕ್ಷ ತಿಮ್ಮ ಮರಾಠಿ, ಮುಲ್ಲಿಬಾರು ಶಾಲೆಯ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಪದ್ಮಾವತಿ,  ತರಬೇತುದಾರ ಹೂವಯ್ಯ ಮರಾಠಿ, ವೆಂಕಟೇಶ ತಿಮ್ಮಪ್ಪ ಕೋಣಪ್ಪನವರ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
     ಮುಲ್ಲಿಬಾರು ಶಾಲೆಯ ಪ್ರಭಾರ ಮುಖ್ಯಶಿಕ್ಷಕ ರಾಮನಾಥ ಮೇಸ್ತ ಸ್ವಾಗತಿಸಿದರು. ಸಹಶಿಕ್ಷಕ ಹಾಲೇಶ್ ವಂದಿಸಿದರು. ಸುರಭಿ ಬೈಂದೂರಿನ ನಿರ್ದೇಶಕ ಸುಧಾಕರ ಪಿ ಕಾರ್ಯಕ್ರಮ ನಿರೂಪಿಸಿದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com