ಸಾಹಿತಿ ಜಯಂತ್ ಕಾಯ್ಕಿಣಿಗೆ ಬಿಂದುಶ್ರೀ ಪ್ರಶಸ್ತಿ

ಬೈಂದೂರು: ರಾಜ್ಯ ರಾಷ್ಟ್ರ ಮಟ್ಟದ ವಿಶೇಷ ಸಾಧಕರನ್ನು ಗುರುತಿಸಿ ಅವರನ್ನು ಸಮಸ್ತ ಬೈಂದೂರು ಕ್ಷೇತ್ರದ ಜನತೆಯ ಪರವಾಗಿ ಗೌರವಿಸುವ ಸಲುವಾಗಿ ಹುಟ್ಟುಹಾಕಿದ ’ಬಿಂದುಶ್ರೀ ಪ್ರಶಸ್ತಿ’ಗೆ ಈ ಬಾರಿ ಡಾ|| ಜಯಂತ್ ಕಾಯ್ಕಿಣಿಯವರು  ಆಯ್ಕೆಯಾಗಿದ್ದು ನಿತ್ಯೋತ್ಸವ ಕವಿ ನಿಸಾರ್ ಅಹಮ್ಮದ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
    ಕವಿ, ಕತೆಗಾರ, ನಾಟಕಕಾರ, ಅಂಕಣಕಾರ, ಟಿವಿ ಸಂದರ್ಶಕರಲ್ಲದೆ ಚಲನಚಿತ್ರ ಸಂಭಾಷಣೆ, ಗೀತೆರಚನೆ, ಚಿತ್ರಕಥೆಗಳಿಂದ ಖ್ಯಾತರಾದ ಜಯಂತ ಕಾಯ್ಕಿಣಿಯವರು  ಹಲವು ಫಿಲ್ಮ ಫೇರ್ ಪ್ರಶಸ್ತಿಗಳಲ್ಲದೆ, ನಾಲ್ಕುಬಾರಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದು ತುಮಕೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಮನ್ನಣೆ ಪಡೆದವಾಗಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳದ ಅಧ್ಯಕ್ಷರಾಗಿದ್ದಲ್ಲದೆ ರಾಷ್ಟ್ರಮಟ್ಟದ ’ಕುಸುಮಾಗ್ರಜ’ ಸಾಹಿತ್ಯ ಪ್ರಶಸ್ತಿ ಪಡೆದ ಮೊದಲ ಲೇಖಕರಾಗಿದ್ದಾರೆ. ಹೀಗೆ ಇವರ ನಿರಂತರ ಸಾಹಿತ್ಯ ಸಾಧನೆಯ ದ್ಯೋತಕ ಇವರನ್ನು ಸರ್ವಾನುಮತದಿಂದ ಈ ಗೌರಕ್ಕೆ  ಆಯ್ಕೆಮಾಡಲಾಗಿದೆ. ಆಯ್ಕೆ ಸಮಿತಿಯಲ್ಲಿ ಪತ್ರಕರ್ತ ಎಸ್ ಜನಾರ್ಧನ್ ಮರವಂತೆ, ಸಾಹಿತಿ ಉಪ್ಪುಂದ ಚಂದರಶೇಖರ ಹೊಳ್ಳ, ಲೇಖಕ ಓಂಗಣೇಶ್ ಉಪ್ಪುಂದ, ಪತ್ರಕರ್ತ ಮಂಜುನಾಥ್ ಚಾಂದ್ ಬೆಂಗಳೂರು, ಕೃಷ್ಣಮೂರ್ತಿ ಉಡುಪ ಇವರಿದ್ದು  ಇದೇ ತಿಂಗಳ ೨೭ರಂದು ಸುರಭಿ (ರಿ)ಬೈಂದೂರು ಇವರ ವಾರ್ಷಿಕೋತ್ಸವದ ಸಂದರ್ಭ ಶಾರದಾವೇದಿಕೆಯಲ್ಲಿ ನಾಡೋಜ ನಿಸಾರ್ ಅಹಮ್ಮದ್ ರವರಿಂದ ಪ್ರಶಸ್ತಿ ಪ್ರದಾನ ಜರುಗಲಿದ್ದು ಸುವರ್ಣಪದಕ, ಸ್ಮರಣಫಲಕ ಹಾಗೂ ನಗದು ೧೦ ಸಾವಿರ ಈ ಪ್ರಶಸ್ತಿ ಒಳಗೊಂಡಿರುತ್ತದೆ ಎಂದು ಸುರಭಿಯ ಸುಧಾಕರ ಪಿ.  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com