ನೂತನ ಕಟ್ಟಡದಲ್ಲಿ ಕೆಸಿಇ ಬೈಂದೂರು ಪುನರಾರಂಭ

ಬೈಂದೂರು: ಕಳೆದ ಹಲವು ವರ್ಷಗಳಿಂದ ಬೈಂದೂರು ಪರಿಸರದ ಶಿಕ್ಷಣಾಕಾಂಕ್ಷಿಗಳಿಗೆ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಾ ಬಂದಿರುವ ಇಲ್ಲಿನ ಕರ್ನಾಟಕ ಕಂಪ್ಯೂಟರ್ ಎಜ್ಯುಕೇಶನ್(ಕೆಸಿಇ), ಬೈಂದೂರು ರಥಬೀದಿಯ ಮಂಜುಶ್ರೀ ಕಾಂಪ್ಲೆಕ್ಸ್‌ನ ಎರಡನೇ ಮಹಡಿಗೆ ಸ್ಥಳಾಂತರಗೊಂಡು ವಿಶಾಲವಾದ ನೂತನ ಕಟ್ಟಡದಲ್ಲಿ ಗಣಹೋಮದೊಂದಿಗೆ  ಶುಭಾರಂಭಗೊಂಡಿತು. ಹೊಸ ಕಟ್ಟಡದಲ್ಲಿ ಗ್ರಾಹಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಒಳಾಂಗಣವನ್ನು ಆಕರ್ಷಕವಾಗಿ  ವಿನ್ಯಾಸಗೊಳಿಸಲಾಗಿದೆ. 

ಗ್ರಾಮೀಣ ಪ್ರದೇಶದಲ್ಲಿ ಯಶಸ್ವೀ ಶಿಕ್ಷಣ ಕ್ರಾಂತಿ:
    ಕಂಪ್ಯೂಟರ್ ಶಿಕ್ಷಣದ ಬಗ್ಗೆ ನಿಧಾನವಾಗಿ ಅರಿವು ಮೂಡುತ್ತಿದ್ದ ಕಾಲಘಟ್ಟದಲ್ಲಿ ಬೈಂದೂರಿನಂತಹ ಗ್ರಾಮೀಣ ಪ್ರದೇಶದಲ್ಲಿ ಆರಂಭಗೊಂಡ ಕರ್ನಾಟಕ ಕಂಪ್ಯೂಟರ್ ಎಜುಕೇಶನ್ ಈ ಭಾಗದ ಜನರಿಗೆ ಆಶಾಕಿರಣವಾಗಿ ಮೂಡಿಬಂದಿದೆ. ಕಳೆದ 12 ವರ್ಷಗಳಿಂದ ಕಡಿಮೆ ಶುಲ್ಕದಲ್ಲಿ ಸಾವಿರಾರು ವಿದ್ಯಾರ್ಥಿಗಳು, ವೃತ್ತಿಪರರು ಕಂಪ್ಯೂಟರ್ ಶಿಕ್ಷಣವನ್ನು ಪಡೆದು ಪರಿಣತರಾಗಿ ಅವರವರ ಕ್ಷೇತ್ರದಲ್ಲಿ ಯಶಸ್ವೀಯಾಗಿ ಮುನ್ನಡೆ ಸಾಧಿಸಿದ್ದಾರೆ.
    ನುರಿತ ಮಾರ್ಗದರ್ಶನ, ಸಕಾಲಿಕ ಸ್ಪಂದನೆ, ಬಡ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ಶುಲ್ಕದಲ್ಲಿ ಕಂಪ್ಯೂಟರ್ ಶಿಕ್ಷಣ, ನಗುಮೊಗದ ಸೇವೆ ಹೀಗೆ ಎಲ್ಲಾ ತರದಲ್ಲೂ ಜ್ಞಾನದಾಹಿಗಳ ಮನಗೆದ್ದಿರುವ ಸಂಸ್ಥೆಯನ್ನು ದಿನೇಶ್ ಕುಂದರ್ ಅವರು ಯಶಸ್ವೀಯಾಗಿ ಮುನ್ನಡೆಸುತ್ತಿದ್ದು ಈಗ ಉತ್ಕೃಷ್ಟ ಸೇವೆಯೊಂದಿಗೆ ಮತ್ತಷ್ಟು ಜನಮೆಚ್ಚುಗೆಗೆ ಪಾತ್ರವಾಗಲಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com