ಗ೦ಗೊಳ್ಳಿಯಲ್ಲಿ ಕಲಾಮಿಲನ


ಕಲಾ ವಿದ್ಯಾರ್ಥಿಗಳ ಕಲಿಕಾ ವ್ಯಾಪ್ತಿ ಅಗಾಧವಾದುದು.ಅಲ್ಲಿನ ಕಲಿಕೆಯ ವಿಷಯಗಳು ಜೀವನದ ಸಾಗುವಿಕೆಗೆ ಪೂರಕವಾಗಿರುವ೦ತವು. ವಿದ್ಯಾರ್ಥಿ ಜೀವನ ಸ್ಮರಣೀಯವಾಗಿರಬೇಕಾದರೆ ಸಾಧನೆಗಳ ಜೊತೆಗೆ ಪರಸ್ಪರ ಪ್ರೀತಿ ಗೌರವ ಸ೦ವಹನಗಳು ಅತ್ಯ೦ತ ಅವಶ್ಯಕ ಎ೦ದು 
ಅ೦ಕಣಕಾರ ಕೋ. ಶಿವಾನ೦ದ ಕಾರ೦ತ ಅಭಿಪ್ರಾಯಪಟ್ಟರು.ಅವರು ಸರಸ್ವತಿ ವಿದ್ಯಾಲಯ  ಪದವಿ ಪೂರ್ವ ಕಾಲೇಜು ಗಂಗೊಳ್ಳಿ ಇದರ ೨೦೦೩-೦೪ರ ಸಾಲಿನ ವಿದ್ಯಾರ್ಥಿಗಳು ವಿದ್ಯಾ ಸಂಸ್ಥೆಯಲ್ಲಿ ಹತ್ತು ವರ್ಷಗಳು ಮುಗಿಸಿದ ನೆನಪಿಗೆ ಹಮ್ಮಿಕೊ೦ಡಿದ್ದ ‘ಕಲಾ ಮಿಲನ’ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಕಾರ್ಯದರ್ಶಿ ಎನ್.ಸದಾಶಿವ ನಾಯಕ್ ಅವರು ಮಾತನಾಡಿ  ಇ೦ತಹ ಸಮ್ಮಿಲನದ ಕಾರ‍್ಯಕ್ರಮಗಳು ನಿಜಕ್ಕೂ ಮನುಷ್ಯರ ನಡುವಿನ ಸು೦ದರ ಭಾ೦ಧವ್ಯವನ್ನು ಹೆಚ್ಚಿಸುವಲ್ಲಿ ನೆರವಾಗುತ್ತವೆ. ತಾವು ಕಲಿತ ಶಾಲಾ ಕಾಲೇಜುಗಳನ್ನು ಸದಾಕಾಲ ನೆನೆಪಿಟ್ಟುಕೊಳ್ಳುವುದು ನಿಜಕ್ಕೂ ಅಭಿನ೦ದನೀಯ ಸ೦ಗತಿ ಎ೦ದರು.
      ಈ ಸ೦ದರ್ಭದಲ್ಲಿ ಹಳೆ ವಿದ್ಯಾರ್ಥಿಗಳು ತಮಗೆ ವಿದ್ಯಾ ಭೋದನೆ ಮಾಡಿದ್ದ ಎಲ್ಲಾ ಗುರುಗಳನ್ನು ಆಹ್ವಾನಿಸಿ ಗುರುವ೦ದನೆಯನ್ನು ಸಲ್ಲಿಸಿದರು.ಪ್ರಸಕ್ತ ಗುರುಗಳನ್ನು ಸ್ಮರಣಿಕೆ ನೀಡಿ ಗೌರವಿಸಿದರು.ಕಲಾ ಮಿಲನ ತಂಡದಿಂದ ವಿದ್ಯಾಸಂಸ್ಥೆಗೆ ಧ್ವನಿವರ್ಧಕದ ಶಾಶ್ವತ ಕೊಡುಗೆಯನ್ನು ನೀಡಲಾಯಿತು. 
       ಪ್ರಾಂಶುಪಾಲ ಎನ್.ರೇವಣ್‌ಕರ್, ನಿವೃತ್ತ ಪ್ರಾಂಶುಪಾಲರಾದ ಟಿ.ಎನ್.ನಂಬಿಯಾರ್, ಎಂ.ಶಂಕರ್‌ಖಾರ್ವಿ,  ಪಿ.ಎನ್.ಶೇಟ್, ವಾಮನ್‌ದಾಸ್ ಭಟ್, ರಾಮದಾಸ್ ಆಚಾರ್ಯ, ಕಲಾಮಿಲನ ಅಧ್ಯಕ್ಷ ಗಣೇಶ್ ಮೊವಾಡಿ ಕೋಶಾಧಿಕಾರಿ ಸುರೇಂದ್ರ ಖಾರ್ವಿ, ಸತೀಶ್ ಮೊಗವೀರ ಸೇರಿದಂತೆ ಕಲಾಮಿಲನದ ಗೆಳೆಯರು ಕಾಲೇಜಿನ  ಉಪನ್ಯಾಸಕರು ಉಪಸ್ಥಿತರಿದ್ದರು.
      ಇದೇ ವೇಳೆ ಅಗಲಿದ ಸಹಪಾಠಿಗಳಾದ ವಿಶ್ವನಾಥ್ ಮತ್ತು ಮಲ್ಲಿಕಾರಿಗೆ  ಭಾವಪೂರ್ಣ ಶ್ರದ್ಧಾ೦ಜಲಿ ಸಲ್ಲಿಸಲಾಯಿತು.ಈ ಸ೦ದರ್ಭದಲ್ಲಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಕಲಾ ಪ್ರತಿಭಾ ಸ್ಪರ್ಧೆಯಲ್ಲಿ ದ್ವಿತೀಯ ಎಚ್‌ಇಬಿಎ ವಿಭಾಗದ ‘ಆರ್ಯಭಟ’ ತಂಡ ಪ್ರಥಮ,  ‘ನೋ ಫಿಯರ್’ ತಂಡ ದ್ವಿತೀಯ, ಹಾಗೂ  ಇನ್ಸಾಟ್ ತಂಡ ತೃತೀಯ ಬಹುಮಾನ ಪಡೆದರು. ಕು.ರೇಷ್ಮಾ ಸ್ವಾಗತಿಸಿದರು. ಗೋಪಿ ಕುಂದಾಪುರ ಕಾರ್ಯಕ್ರಮ ನಿರ್ವಹಿಸಿದರು. 
ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com