ಕಂಬಳ ನಿಷೇದದ ವಿರುದ್ಧ ರಿಟ್‌ ಅರ್ಜಿ ಸಲ್ಲಿಕೆ

ಸಿದ್ದಾಪುರ: ಶತಮಾನಗಳ ಇತಿಹಾಸ ಹೊಂದಿರುವ ಕರಾವಳಿಯ ಜಾನಪದ ಕ್ರೀಡೆ ಕಂಬಳವನ್ನು ನಿಷೇಧಿಸಿರುವುದನ್ನು ವಿರೋಧಿಸಿ ಹಾಗೂ ಹಾಲಾಡಿ ಗ್ರಾಮದ ದೈವದತ್ತವಾದ ಚೋರಾಡಿ ತೀರ್ಥ ವಿನಾಯಕ ಕಂಬಳದ ಬಗ್ಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ವಕೀಲ ಪವನ್‌ಚಂದ್ರ ಶೆಟ್ಟಿ ಅವರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

ಸಂವಿಧಾನದ ಆರ್ಟಿಕಲ್‌ 25ರ ಅಡಿಯಲ್ಲಿ ಯಾವುದೇ ಭಾರತೀಯ ತನ್ನ ಸಾಕು ಪ್ರಾಣಿಯೊಂದಿಗೆ ಜೀವನ ನಡೆಸುವಾಗ, ಅದರಿಂದ ಹಿಂಸೆ ರಹಿತವಾಗಿ ಮನೋರಂಜನೆಯನ್ನು ಬಯಸಬಹುದು. ಕೋಣ ಕೂಡ ಒಂದು ಸಾಕು ಪ್ರಾಣಿಯಾಗಿದೆ. ಕೋಣದಿಂದ ರೈತನು ಮನೋರಂಜನೆಗಾಗಿ ಅಹಿಂಸ್ಮಾಕವಾಗಿ ಕಂಬಳವನ್ನು ನಡೆಸಬಹುದು ಎನ್ನುವ ವಾದದ ಅಡಿಯಲ್ಲಿ ಹೈಕೋರ್ಟ್‌ನಲ್ಲಿ ರಿಟ್‌ ಹಾಕಲಾಗಿದೆ. ಈ ರಿಟ್‌ ಅರ್ಜಿಯನ್ನು ಹೈಕೋರ್ಟ್‌ ವಿಚಾರಣೆಗೆ ಕೈಗೆತ್ತಿಕೊಂಡಿದ್ದು, ಡಿ.8ರಂದು ವಿಚಾರಣೆ ನಡೆಯಲಿದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ವಕೀಲ ಪವನ್‌ಚಂದ್ರ ಶೆಟ್ಟಿ ಅವರು ಪತ್ರಿಕೆಗೆ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com