ಮಂಗಳೂರು ವಿ.ವಿ. ಮಟ್ಟದ ಅತ್ಯುತ್ತಮ ಎನ್‌ಸಿಸಿ ಕೆಡೆಟ್‌ ಸ್ಪರ್ದೆ

ಕಾರ್ಕಳ: ಸ್ಥಳೀಯ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಡಿ. 19ರಂದು ಜರಗಲಿರುವ ಪ್ರೊ| ಕೆ. ದಾಮೋದರ ಕಿಣಿ ಸಂಸ್ಮರಣಾ ಕಾರ್ಯಕ್ರಮದ ಪೂರ್ವಭಾವಿಯಾಗಿ ಮಂಗಳೂರು ವಿ.ವಿ. ಮಟ್ಟದ ಅತ್ಯುತ್ತಮ ಎನ್‌ಸಿಸಿ ಕೆಡೆಟ್‌ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
    ಟರ್ನ್ ಔಟ್‌, ಡ್ರಿಲ್‌, ಫೈರಿಂಗ್‌, ಭಾಷಣ, ಎನ್‌ಸಿಸಿ ಹಾಗೂ ಸಾಮಾನ್ಯ ಅರಿವಿನ ಲಿಖೀತ ಪರೀಕ್ಷೆ, ಸಂದರ್ಶನ, ಭಾಷಣ -ಇವು ಸ್ಪರ್ಧಾ ವಿಷಯಗಳಾಗಿದ್ದು, ಮಂಗಳೂರು ವಿ.ವಿ. ಸಂಯೋಜನೆಗೊಳಪಡುವ ಪದವಿ ಕಾಲೇಜುಗಳ ಪ್ರತಿ ಎನ್‌ಸಿಸಿ ಘಟಕದ ಇಬ್ಬರು ಪುರುಷ ಅಥವಾ ಮಹಿಳಾ ಕೆಡೆಟ್‌ಗಳು ಭಾಗವಹಿಸಬಹುದು.
    ಆಸಕ್ತರು ಡಿ. 13ಕ್ಕೆ ಮೊದಲು ಕಾರ್ಯದರ್ಶಿ, ಪ್ರೊ| ಕೆ.ಡಿ. ಕಿಣಿ ಸಂಸ್ಮರಣಾ ಸಮಿತಿ, ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ ಅವರಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಪ್ರಕಟನೆ ತಿಳಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com